ಬೆಂಗಳೂರು : ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಸ್‍ಡಿ ಕಿರುತೆರೆ ನಟಿ,ನಟರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಈ ಹಿನ್ನೆಲೆ ನಟಿ ಗೀತಾಭಾರತಿ ಭಟ್ ಮತ್ತು ನಟ ಅಭಿಷೇಕ್ ದಾಸ್ ವಿಚಾರಣೆಗೆ ಹಾಜರಾಗಿದ್ದಾರೆ.
ವಿಚಾರಣೆಗೆ ತೆರಲುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಗೀತಾಭಾರತಿ ಭಟ್, ಸೆ.19ರಂದು ನನಗೆ ನೋಟಿಸ್ ಕೊಟ್ಟಿದ್ದು, ಐಎಸ್ ಡಿಗೆ ನಾನು ಸಪೋರ್ಟ್ ಮಾಡುತ್ತೇನೆ.
ಅವರು ಕೇಳುವ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರಿಸುವ ಮೂಲಕ ಸಹಕಾರ ನೀಡುತ್ತೇನೆ ಎಂದರು.
ನಟ ಅಭಿಷೇಕ್ ಮಾತನಾಡಿ, ಸೋಮವಾರ ರಾತ್ರಿ ನನಗೆ ನೋಟಿಸ್ ಬಂದಿದೆ. ಹೀಗಾಗಿ ವಿಚಾರಣೆಗೆ ಬಂದಿದ್ದೇನೆ.
ನನ್ನ ಪ್ರಕಾರ ಡ್ರಗ್ಸ್ ಕೇಸಿನಲ್ಲಿ ಬಂಧಿತರಾಗಿರುವ ವ್ಯಕ್ತಿಗಳ ಬಗ್ಗೆ ಕೇಳಲು ಕರೆದಿರಬಹುದು ಅಥವಾ ಆ ವ್ಯಕ್ತಿಗಳನ್ನು ಮುಂಚೆ ಎಲ್ಲಾದರೂ ಭೇಟಿಯಾಗಿದ್ದೀರಾ, ಯಾವುದಾದರೂ ಪಾರ್ಟಿಗೆ ಹೋಗಿದ್ದೀರ ಎಂದು ಕೇಳಲು ಕರೆದಿರಬಹುದು ಎಂದರು.
ಇದೇ ವೇಳೆ ಕಿರುತೆರೆಯಲ್ಲಿ ಡ್ರಗ್ ಮಾಫಿಯಾ ಇದ್ಯಾ ಎಂಬ ಪ್ರಶ್ನೆ ಗೆ ಉತ್ತರಿಸಿದ ಅವರು, ಕಿರುತೆರೆಯಲ್ಲಿ ಇದಿಯೋ ಇಲ್ಲವೋ ಗೊತ್ತಿಲ್ಲ.
ಆದರೆ ನಮ್ಮ ಸರ್ಕಲ್ ನಲ್ಲಿ ಡ್ರಗ್ಸ್ ಇಲ್ಲ. ನಾನು ಓಡಾಡಿರುವ ಸ್ನೇಹಿತರು ಕೂಡ ಡ್ರಗ್ಸ್ ತೆಗೆದುಕೊಳ್ಳುವುದನ್ನು ನಾನು ನೋಡಿಲ್ಲ.
ಕೆಲವು ವ್ಯಕ್ತಿಗಳ ಬಗ್ಗೆ ವಿಚಾರಣೆ ಮಾಡಬೇಕು. ಅವರ ಬಗ್ಗೆ ನಿಮಗೆ ಗೊತ್ತಿರುವ ಮಾಹಿತಿ ಕೊಟ್ಟು ಹೋಗಿ ಎಂದು ಫೋನ್ ಮಾಡಿ ಕರೆದಿದ್ದಾರೆ. ಹೊಸ ಸುದ್ದಿಗಳನ್ನು ಇಲ್ಲಿ ಓದಿ
ಹೀಗಾಗಿ ಬಂದಿದ್ದೇನೆ. ಈಗಾಗಲೇ ಮೂವರು ಕಿರುತೆರೆ ನಟರು ಬಂದಿದ್ದಾರೆ. ಇನ್ನೂ ಕೆಲವರು ಬರುತ್ತಾರೆ, ನಾಳೆನೂ ಕೆಲ ನಟರು ಬರುತ್ತಾರೆ. ನನಗೆ ಗೊತ್ತಿರುವುದನ್ನು ನಾನು ಹೇಳುತ್ತೇನೆ ಎಂದು ತಿಳಿಸಿದರು.








