ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅಬ್ಬರವನ್ನೇ ಮರೆಸುವಂತೆ ಸುದ್ದಿ ಮಾಡಿದ ಡ್ರಗ್ಸ್ ಮಾಫಿಯಾ ಪ್ರಕರಣ ಕೇವಲ ನಟಿ ಮಣಿಯರಿಗಷ್ಟೆ ಸೀಮಿತವಾಯ್ತಾ..?
ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 4 ರಂದೇ ಪ್ರಕರಣ ಕುರಿತು ಎಫ್ ಐಆರ್ ದಾಖಲಾಗಿದ್ದರೂ, ಈವರೆಗೂ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ ಯಾಕೆ..?
ಕೊರೊನಾ ಆತಂಕವನ್ನೇ ಮರೆಸಿದ ಡ್ರಗ್ಸ್ ಪ್ರಕರಣ ಈಗ ಹಳ್ಳ ಹಿಡಿತಿದ್ಯಾ..? ಸದ್ಯ ಈ ಪ್ರಕರಣದ ಬಗ್ಗೆ ಕುತೂಹಲ ಬೆಳೆಸಿಕೊಂಡಿದ್ದ ಕೆಲ ಪ್ರಜ್ಞಾವಂತರಿಗೆ ಮೂಡುತ್ತಿರುವ ಪ್ರಶ್ನೆಗಳಿವು.
ಹೌದು..! ರಾಜ್ಯದಲ್ಲಿ ಕೊರೊನಾ ಅಟ್ಟಹಾಸದ ನಡುವೆ ಡ್ರಗ್ಸ್ ಮಾಫಿಯಾ ಘಾಟು ಜೋರಾಗಿ ಹಬ್ಬಿದೆ. ಅದು ಯಾವ ಮಟ್ಟಿಗೆ ಅಂದ್ರೆ ಟಿವಿಯಲ್ಲಿ ಡ್ರಗ್ ಮಾಫಿಯಾ ಎಂಬ ಶಬ್ಧ ಕೇಳಿದ ತಕ್ಷಣ ಎಲ್ಲರ ಕಿವಿಗಳು ದೊಡ್ಡದಾಗುತ್ತಿವೆ.
ಇವತ್ತು ಯಾರು ಹೆಸರು ಕೇಳಿ ಬಂತು.. ಯಾರು ಅರೆಸ್ಟ್ ಆದ್ರು. ಯಾವ ಸ್ಟಾರ್ ಈ ಮಾಫಿಯಾದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಗಂಟೆಗಟ್ಟಲೇ ಟಿವಿ ಮುಂದೆ ಕುಳಿತು ಸಮಯ ಕಳೆಯುತ್ತಿದ್ದಾರೆ.
ಆದ್ರೆ ಇದೀಗ ಈ ಪ್ರಕರಣ ಹಳ್ಳ ಹಿಡಿತಿದ್ಯಾ ಅನ್ನೋ ಒಂದು ಸಣ್ಣ ಅನುಮಾನ ಎಲ್ಲರಲ್ಲೂ ಮೂಡಲು ಶುರುವಾಗಿದೆ.
ಇದನ್ನೂ ಓದಿ : ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್, ಡಿ.ಕೆ ಸುರೇಶ್ಗೆ ಸಿಬಿಐ ಶಾಕ್..!
ಈ ಪ್ರಕರಣದ ಸಂಬಂಧ ಪೊಲೀಸರು ನಟಿಯರಾದ ರಾಗಿಣಿ, ಸಂಜನಾ ಅವರನ್ನು ಬಂಧಿಸಿದ್ದು ಬಿಟ್ಟಿರೇ ಬೇರ್ಯಾವ ದೊಡ್ಡ ತಲೆಯನ್ನೂ ಬಂಧಿಸಿಲ್ಲ, ಹೆಸರನ್ನೂ ಹೇಳಿಲ್ಲ. ಡ್ರಗ್ ಮುಕ್ತ ಕರ್ನಾಟಕ ಮಾಡ್ತೀವಿ.
ಈ ಮಾಫಿಯಾದಲ್ಲಿ ಯಾರೇ ಇದ್ದರೂ ನಾವು ಸುಮ್ಮನೆ ಬಿಡಲ್ಲ ಎಂದು ಪೊಲೀಸರಿಗೆ ಬೂಸ್ಟ್ ನೀಡುವಂತೆ ಮಾತನಾಡಿದ ರಾಜಕಾರಣಿಗಳು ಕೂಡ ಈ ಉಪ ಚುನಾವಣೆಯಲ್ಲಿ ಫುಲ್ ಬ್ಯುಸ್ ಆಗಿದ್ದಾರೆ.
ಎ1, ಎ5 ಆರೋಪಿಗಳು ಇನ್ನೂ ಸಿಕ್ಕಿಲ್ವಾ..?
ಡ್ರಗ್ ಮಾಫಿಯಾ ಪ್ರಕರಣ ಸಂಬಂಧ ಸೆಪ್ಟೆಂಬರ್ 4 ರಂದು ಬೆಂಗಳೂರು ನಗರದ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಇದರಲ್ಲಿ ರಾಗಿಣಿ ಸೇರಿ 12 ಮಂದಿ ಮೇಲೆ ಎಫ್ ಐಆರ್ ಆಗಿತ್ತು.
ಆದ್ರೆ ಇದೆಲ್ಲಾ ಆಗಿ ಒಂದು ತಿಂಗಳು ಕಳೆದರೂ ಎ1 ಆರೋಪಿಯಾಗಿರುವ ಶಿವಪ್ರಕಾಶ್ ಇನ್ನೂ ಅರೆಸ್ಟ್ ಆಗಿಲ್ಲ. ಎ5 ಆರೋಪಿ ಆದಿತ್ಯ ಆಳ್ವ ಕೂಡ ಇನ್ನೂ ಸಿಕ್ಕಿಲ್ಲ.
ಬರೋಬ್ಬರಿ ತಿಂಗಳಾದರೂ ಪೊಲೀಸರಿಗೆ ಇವರನ್ನು ಬಂಧಿಸೋಕೆ ಆಗಿಲ್ವಾ..? ಎಂದು ಜನರು ಪ್ರಶ್ನಿಸುತ್ತಿದ್ದಾರೆ.