durga visarjan: ದುರ್ಗಾ ವಿಸರ್ಜನೆ ವೇಳೆ ದಿಢೀರ್ ಪ್ರವಾಹ…
ದುರ್ಗಾ ವಿಸರ್ಜನೆ ವೇಳೆ ದಿಢೀರ್ ಪ್ರವಾಹ – 8 ಮಂದಿ ಸಾವು…
ದುರ್ಗಾ ವಿಗ್ರಹದ ವಿಸರ್ಜನೆ ವೇಳೆ ದಿಡೀರ್ ಪ್ರವಾಹದಲ್ಲಿ ಸಿಲುಕಿ 8 ಜನ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ . ಜಲ್ಪೈಗುರಿಯಲ್ಲಿ ಮಾಲ್ ನದಿ ಪ್ರವಾಹಕ್ಕೆ ಸಿಲುಕಿ 8 ಸಾವನ್ನಪ್ಪಿದ್ದು, ನದಿಯ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ 70 ಜನರ ರಕ್ಷಣೆ ಮಾಡಲಾಗಿದೆ.
ಈ ದುರಂತದಲ್ಲಿ 13 ಜನರಿಗೆ ಗಾಯಗಳಾಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಮಾಲ್ ನದಿ ಪ್ರವಾಹದಲ್ಲಿ ಸಿಲುಕಿ ಇನ್ನೂ 30-40 ಜನರು ನಾಪತ್ತೆಯಾಗಿದ್ದಾರೆ. ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಏಕಾಏಕಿ ಪ್ರವಾಹ ಉಂಟಾಗಿದ್ದರಿಂದ ಈ ದುರಂತ ಸಂಭವಿಸಿದೆ.
#WATCH | WB: Flash flood hits Mal River in Jalpaiguri during Durga Visarjan; 7 people dead, several feared missing
Many people were trapped in river & many washed away. Bodies of 7 people were recovered. NDRF& civil defence deployed; rescue underway: Jalpaiguri SP Debarshi Dutta pic.twitter.com/cRT3nnp7Gz
— ANI (@ANI) October 5, 2022
ನಿನ್ನೆ ಸಂಜೆ ದುರ್ಗಾ ವಿಗ್ರಹದ ವಿಸರ್ಜನೆಗೆ ನೂರಾರು ಜನರು ನದಿಯ ದಡದಲ್ಲಿ ಜಮಾಯಿಸಿದ್ದರು. ಆಗ ಇದ್ದಕ್ಕಿದ್ದಂತೆ ಹಠಾತ್ ಪ್ರವಾಹ ಅಪ್ಪಳಿಸಿ ಜನರು ಕೊಚ್ಚಿಹೋಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕಚೇರಿ ಈ ದುರಂತಕ್ಕೆ ಸಂತಾಪ ಸೂಚಿಸಿದ್ದು, “ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ದುರ್ಗಾ ಪೂಜೆಯ ಸಂದರ್ಭದಲ್ಲಿ ಸಂಭವಿಸಿದ ದುರ್ಘಟನೆಯಿಂದ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು” ಎಂದು ಪ್ರಧಾನ ಮಂತ್ರಿಯನ್ನು ಉಲ್ಲೇಖಿಸಿ ಪಿಎಂಒ ಟ್ವೀಟ್ ಮಾಡಿದೆ.
durga visarjan: Eight dead after flash floods during Durga Visarjan in Jalpaiguri; death toll likely to rise