Dutee Chand : ನಿಷೇಧಿತ ಮದ್ದು ಸೇವನೆ ಅಥ್ಲೀಟ್ ದ್ಯುತಿ ಚಾಂದ್ ಅಮಾನತು
ಭಾರತದ ವೇಗದ ಮಹಿಳಾ ಅಥ್ಲೀಟ್ ಹಾಗೂ ರಾಷ್ಟ್ರೀಯ ಚಾಂಪಿಯನ್ ದ್ಯೂತಿ ಚಾಂದ್ ನಿಷೇಧಿತ ಉದ್ದೀಪನಾ ಔಷಧ ಸೇರಿಸಿರುವುದು ಕಂಡು ಬಂದಿದ್ದು ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.
ಉದ್ದೀಪನಾ ಮದ್ದು ಸೇವಿಸಿರುವುದು ಕಂಡುಬಂದಿರುವುದರಿಂದ ಪರೀಕ್ಷಾ ಸ್ಪರ್ಧೆಯಿಂದ ಹೊರ ಬಿದ್ದಿದ್ದಾರೆ. ಆ್ಯಂಡ್ರೋಜೀನ್ ರೆಸೆಪ್ಟರ್ ಮೊಡ್ಯಲೆಟರ್ ಅಂಶವಿರುವುದು ಕಂಡು ಬಂದಿದೆ.
ವಿಶ್ವ ಉದ್ದೀಪನಾ ಡೋಪಿಂಗ್ ಏಜೆನ್ಸಿ ಪ್ರಕಾರ ನಿಚೇಧಿತ ಮದ್ದುಗಳು ಕ್ರೀಡೆಯಲ್ಲಿ ದುರ್ಬಳಕೆಯಾಗುವುದು ಹೆಚ್ಚು. ಇದು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮೂಳೆ ಮತ್ತು ಮಾಂಶವನ್ನು ಗಟ್ಟಿ ಮಾಡುತ್ತದೆ ಎಂದು ಹೇಳೂತ್ತದೆ.
ದ್ಯೂತಿ ಚಾಂದ್, 2022ರಲ್ಲಿ ರಾಷ್ಟ್ರೀಯ ಚಾಂಪಿಯನ್ನಾಗಿ ಹೊರಹೊಮ್ಮಿದರು. 200 ಮೀ.ಓಟದಲ್ಲಿ ಸ್ಪರ್ಧಿಸಿದರು ಆದರೆ ಫೈನಲ್ಗೆ ಅರ್ಹತೆ ಪಡೆಯಲಿಲ್ಲ. 100 ಮೀ,ಓಟದಲ್ಲಿ 6ನೇ ಸ್ಥಾನ ಪಡೆದರು. ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ 100 ಮೀ.ನಲ್ಲಿ ಮತ್ತು 200 ಮೀ,ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
2013,2017 ಮತ್ತು 2019ರ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ದ್ಯೂತಿ ಚಾಂದ್ ಕಂಚು ಗೆದ್ದಿದ್ದಾರೆ.
Dutee Chand suspended for consuming banned medicine