ಗದಗ: ಕರ್ತವ್ಯ ನಿರತ ಯೋಧರೊಬ್ಬರು ಹೃದಯಾಘಾತದಿಂದಾಗಿ (Heart Attack) ಹುತಾತ್ಮರಾಗಿರುವ ಘಟನೆ ಸಿಕ್ಕಿಂನ (Sikkim) ಬಾಂಗ್ ಡೋಂಗ್ರೆಯಲ್ಲಿ ನಡೆದಿದೆ.
ಜಿಲ್ಲೆಯ (Gadag) ನರಗುಂದ ತಾಲೂಕಿನ ರಡ್ಡೆರನಾಗನೂರ ಗ್ರಾಮದ ರಾಮನಗೌಡ ಚಂದ್ರಗೌಡರ (40) ಹೃದಯಾಘಾತಕ್ಕೆ ಬಲಿಯಾದವರು. ಇವರು ಬಾಂಗ್ ಡೋಂಗ್ರೆಯಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿಯೇ ಹಿಮಪಾತದ ನಡುವೆ ರಕ್ತದೊತ್ತಡದಲ್ಲಿ ಏರುಪೇರಾಗಿದೆ ಎನ್ನಲಾಗಿದೆ.
2002 ರಲ್ಲಿ ಐಟಿಬಿಪಿಗೆ (ಇಂಡಿಯನ್ ಟಿಬೆಟಿಯನ್ ಬಾರ್ಡರ್ ಸೆಕ್ಯೂರಿಟಿ ಫೋರ್ಸ್) ನೇಮಕವಾಗಿದ್ದರು. 22 ವರ್ಷಗಳಿಂದ ಅವರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಉತ್ತರಾಖಂಡ, ಅಸ್ಸಾಂ, ಮಿಜೋರಾಂ, ಚಂಡೀಗಢ, ಸಿಕ್ಕಿಂ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಇದೇ ಎಪ್ರಿಲ್ ನಲ್ಲಿ ಸೇವಾ ನಿವೃತ್ತಿ ಹೊಂದಬೇಕಾಗಿತ್ತು. ಆದರೆ, ಅಷ್ಟರಲ್ಲಿಯೇ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ನಾಳೆ ಸ್ವಗ್ರಾಮದಲ್ಲಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದೆ.