ಜಿಂದಾಲ್ ಗೆ ಭೂಮಿ ಪರಭಾರೆ : ಕೈ ಶಾಸಕ ಈ ತುಕಾರಾಂ ಸುದ್ದಿಗೋಷ್ಠಿ
ಬಳ್ಳಾರಿ : ಜಿಂದಾಲ್ ಕಂಪನಿಗೆ 3667 ಎಕರೆ ಭೂಮಿ ಪರಭಾರೆ ವಿಚಾರವಾಗಿ ಸಂಡೂರು ಕಾಂಗ್ರೆಸ್ ಶಾಸಕ ಈ ತುಕಾರಾಂ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ಒಪ್ಪಂದದಂತೆ ಜಿಂದಾಲ್ ಕಂಪನಿ ಲೀಸ್ ಕಮ್ ಸೇಲ್ ಡೀಡ್ ಮಾಡಿಕೊಂಡಿದೆ. 2008-13 ರವರೆಗೆ ಕುಡುತಿನಿ ಬಳಿ 11 ಸಾವಿರ ಎಕರೆ ಭೂಸ್ವಾಧೀನವಾಗಿದ್ದು, ಬಿಜೆಪಿ ಸರ್ಕಾರದಲ್ಲಿ ಭೂಮಿ ಸ್ವಾಧೀನವಾಗಿದೆ.
ಸ್ವಾಧೀನವಾದ ಭೂಮಿಯಲ್ಲಿ ಇದುವರೆಗೆ ಯಾವುದೇ ಅಭಿವೃದ್ಧಿ ಆಗಿಲ್ಲ. ಬಿಜೆಪಿ ಅವರು ಇದನ್ನ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
ಮುಂದುವರೆದು 1994 ರಲ್ಲಿ ಕೂಡ ಲೀಸ್ ಕಮ್ ಸೇಲ್ ಡೀಡ್ ನಲ್ಲಿ ಭೂಮಿ ಪರಭಾರೆ ಮಾಡಲಾಗಿತ್ತು. ಈಗಲೂ ಕೂಡ ಸರ್ಕಾರ ಇದೇ ಒಪ್ಪಂದದಂತೆ ಭೂಮಿ ಪರಭಾರೆ ಮಾಡಬೇಕು ಎಂದು ಹೇಳಿದ್ದಾರೆ.
ಇನ್ನು ಸಚಿವ ಆನಂದ್ ಸಿಂಗ್ ಜಿಂದಾಲ್ ಗೆ ಭೂಮಿ ಪರಭಾರೆಗೆ ವಿರೋಧ ವಿಚಾರವಾಗಿ ಮಾತನಾಡಿ, ಸಚಿವ ಆನಂದ್ ಸಿಂಗ್ ಕೂಡ ಗಣಿ ಉದ್ಯಮಿಯಾಗಿದ್ದವರು.
ಆದರೆ ಅವರಿಗೆ ಸ್ಟಿಲ್ ಪ್ಲಾಂಟ್ ಆರಂಭಿಸಲು ಆಗಲಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಅಲ್ಲದೆ ಅಭಿವೃದ್ಧಿಗೆ ಪೂರಕವಾಗಿ ಸಚಿವ ಆನಂದ್ ಸಿಂಗ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.









