Earthquake | ರಾಜ್ಯದ ಗಡಿ ಭಾಗದಲ್ಲಿ ಕಂಪಿಸಿದ ಭೂಮಿ
ಕೊಡಗು ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ
ದೊಡ್ಡ ಶಬ್ದದೊಂದಿಗೆ ಕಂಪಿಸಿದ ಭೂಮಿ
ಭಾನುವಾರ ಸಂಜೆ 6.15 ಸುಮಾರಿಗೆ ಕಂಪನ
ಭೂಮಿ ಕಂಪಿಸಿದ ಕಾರಣ ಜನರಲ್ಲಿ ಆತಂಕ
ದಕ್ಷಿಣ ಕನ್ನಡ : ರಾಜ್ಯದ ಗಡಿ ಭಾಗದಲ್ಲಿ ಭೂಮಿ ಮತ್ತೆ ಕಂಪಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಮತ್ತು ಮಡಿಕೇರಿ ಗಡಿಭಾಗವಾದ ಕಲ್ಮಕಾರು ಭಾಗದಲ್ಲಿ ದೊಡ್ಡ ಶಬ್ದದೊಂದಿಗೆ ಭೂಮಿ ಕಂಪಿಸಿದೆ.
ಭಾನುವಾರ ಸಂಜೆ 6.15 ರ ಸುಮಾರಿಗೆ ಕಲ್ಮಕಾರಿನ ಮೆಂಟೆಕಜೆ, ಗುಳಿಕ್ಕಾನ ಪ್ರದೇಶದಲ್ಲಿ ಶಬ್ದ ಹಾಗೂ ಕಂಪನವಾಗಿದೆ. ಕಲ್ಲುಗುಂಡಿಯ ಚಟ್ಟೆಕಲ್ಲು, ಕೊಯನಾಡಿನ ಮಂಗಳಪಾರೆ ಎಂಬಲ್ಲಿ ಸಹ ಭೂಮಿ ಕಂಪಿಸಿದೆ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.
ಅಂದಹಾಗೆ ಕಳೆದ ಒಂದು ತಿಂಗಳ ಹಿಂದೆ ಸುಳ್ಯ ತಾಲೂಕಿನ ಭಾಗದಲ್ಲಿ ಭೂಮಿ ಏಳೆಂಟು ಬಾರಿ ಕಂಪಿಸಿತ್ತು. ಇದೀಗ ಮತ್ತೆ ಭೂಮಿ ಕಂಪಿಸಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ.