ಅಫ್ಘಾನ್ ನಲ್ಲಿ ಭೂಕಂಪ : 4.5 ತೀವ್ರತೆ Afghanistan
ಅಪ್ಘಾನಿಸ್ತಾನ : ತಾಲಿಬಾನ್ ಹಿಡಿತದಲ್ಲಿರುವ ಅಫ್ಘಾನಿಸ್ತಾನದಲ್ಲಿ ಬೆಳ್ಳಂ ಬೆಳಿಗ್ಗೆ ಭೂಮಿ ಕಂಪಿಸಿದೆ.
ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯ ಭೂಕಂಪವು ಅಫ್ಘಾನಿಸ್ತಾನದ ಫಾಯ್ಜಾಬಾದ್ ನಿಂದ ಆಗ್ನೇಯಕ್ಕೆ 83 ಕಿ.ಮೀ ದೂರದಲ್ಲಿ ಮಂಗಳವಾರ ಬೆಳಿಗ್ಗೆ 6.08ಕ್ಕೆ ಅಪ್ಪಳಿಸಿದೆ ಎಂದು ವರದಿಯಾಗಿದೆ.
ಇನ್ನು ಭೂಕಂಪನದಿಂದ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಇತ್ತ ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡಿದ್ದಾರೆ.
ಭಾನುವಾರ ಕಾಬೂಲ್ ಮೇಲೆ ಉಗ್ರರು ಹಿಡಿತ ಸಾಧಿಸುತ್ತಿದ್ದಂತೆ ಅಫ್ಘಾನ್ ಅಧ್ಯಕ್ಷ ಅಲ್ಲಿಂದ ಪರಾರಿಯಾಗಿದ್ದಾರೆ.
ಇತ್ತ ಅಫ್ಘಾನ್ ಜನರು ಜೀವ ಭಯದಿಂದ ಕಾಲ ಕಳೆಯುತ್ತಿದ್ದು, ಬೇರೆ ದೇಶಗಳತ್ತ ಮುಖ ಮಾಡುತ್ತಿದ್ದಾರೆ.









