ಹರಿಯಾಣದ ರೋಹ್ಟಕ್ ನಲ್ಲಿ ಭೂಕಂಪ
ಹೊಸದಿಲ್ಲಿ, ಮೇ 30: ರಾಜಧಾನಿ ದೆಹಲಿಯಿಂದ 64 ಕಿಲೋಮೀಟರ್ ದೂರದಲ್ಲಿರವ ರೋಹ್ಟಕ್ ಹಾಗೂ ಹರಿಯಾಣದಲ್ಲಿ ಪ್ರಬಲ ಭೂಕಂಪನವಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ.
ಶುಕ್ರವಾರ ರಾತ್ರಿ 9.08ರ ಸಮಯದಲ್ಲಿ ಭೂಕಂಪನವಾಗಿದ್ದು, 16 ಕಿ.ಮೀ. ವೇಗದಲ್ಲಿ ರಿಕ್ಟರ್ ಮಾಪನದಲ್ಲಿ 4.6 ತೀವ್ರತೆ ದಾಖಲಾಗಿದೆ. ಸುಮಾರು 20 ನಿಮಿಷಗಳ ಕಾಲ ಭೂಮಿ ಕಂಪಿಸಿದ್ದು, ರಸ್ತೆಗಳು ಬಿರುಕು ಬಿಟ್ಟಿದ್ದು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ ಮನೆಯೊಳಗಡೆ, ಕಟ್ಟದೊಳಗೆ ಇದ್ದವರು ಹೊರಗೆ ಓಡಿ ಬಂದಿದ್ದಾರೆ.
ಭೂಕಂಪನದ ಕೇಂದ್ರ ರೋಹ್ಟಕ್ ನಲ್ಲಿ ಸುಮಾರು 3.3 ಕೀ.ಮೀ ಆಳದಲ್ಲಿದೆ ಎಂದು ಹೇಳಲಾಗಿದ್ದು, ಹರ್ಯಾಣಾ-ಪಂಜಾಬ್ ಗಳಲ್ಲಿಯೂ ಕೂಡ ಜನರಿಗೆ ಭೂಮಿ ಕಂಪಿಸಿರುವ ಅನುಭವವಾಗಿದೆ. ದೆಹಲಿಯಾದ್ಯಂತ ಮತ್ತು ಹತ್ತಿರದ ಪ್ರದೇಶಗಳಾದ ನೋಯ್ಡಾ ಮತ್ತು ಗುರುಗ್ರಾಮ್ ನಲ್ಲಿಯೂ ಭೂಮಿ ಕಂಪಿಸಿದ್ದು, ಸಾವು ನೋವು ಅಥವಾ ಆಸ್ತಿಪಾಸ್ತಿ ಹಾನಿಯ ಬಗ್ಗೆ ವರದಿಗಳು ಬಂದಿಲ್ಲ.








