Earthquake in Himachal Pradesh: ಹಿಮಾಚಲದಲ್ಲಿ ಲಘು ಭೂಕಂಪ – 3.2 ತೀವ್ರತೆ….
ಹಿಮಾಚಲ ಪ್ರದೇಶದಲ್ಲಿ ಲಘು ಭೂಕಂಪ ಸಂಭವಿಸಿದೆ. ಶನಿವಾರ ಬೆಳಗ್ಗೆ 5.17ಕ್ಕೆ ಧರ್ಮಶಾಲಾದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 3.2 ಆಗಿತ್ತು.
ಭೂಕಂಪದ ಕೇಂದ್ರವು ಧರ್ಮಶಾಲಾದಿಂದ 76 ಕಿ.ಮೀ ದೂರದಲ್ಲಿದೆ. ಭೂಮಿಯ ಒಳಭಾಗದಲ್ಲಿ 5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಹೇಳಲಾಗಿದೆ. ಲಘು ಭೂಕಂಪದಿಂದಾಗಿ ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಉತ್ತರಾಖಂಡದ ಜೋಶಿಮಠದ ಭೂಕಂಪದ ಮರುದಿನವೇ ಧರ್ಶಶಾಲಾದಲ್ಲಿ ಭೂಮಿ ಕಂಪಿಸಿತು. ಜೋಶಿಮಠದಲ್ಲಿ ಶುಕ್ರವಾರ ಬೆಳಗಿನ ಜಾವ 2.12ಕ್ಕೆ 2.9 ತೀವ್ರತೆಯ ಕಂಪನ ಸಂಭವಿಸಿದ್ದು, ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.
Earthquake in Himachal Pradesh: Light earthquake in Himachal – 3.2 magnitude….