Earthquake |ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪನ
ಮಡಿಕೇರಿ : ಒಂದು ಕಡೆ ಭಾರಿ ಮಳೆಯಿಂದ ತತ್ತರಿಸುತ್ತಿರುವ ಕೊಡಗು ಜಿಲ್ಲೆಯಲ್ಲಿ ಪದೇ ಪದೇ ಆಗುತ್ತಿರುವ ಭೂಕಂಪನ ಜನರನ್ನು ಆತಂಕಕ್ಕೀಡು ಮಾಡಿದೆ.
ಕಳೆದ ಕೆಲವು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ.
ಇದರಿಂದ ಈಗಾಗಲೇ ಸಾಕಷ್ಟು ಅನಾಹುತಗಳು ನಡೆದಿವೆ.
ಈ ನಡುವೆ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಇಂದು ಬೆಳಿಗ್ಗೆ 6 : 24 ರ ಸುಮಾರಿಗೆ ಕೊಡಗಿನ ಗಡಿ ಗ್ರಾಮ ಚೆಂಬು ಸುತ್ತ-ಮುತ್ತ ನಿವಾಸಿಗಳಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ಸ್ಥಳೀಯರ ಪ್ರಕಾರ ಶನಿವಾರ ರಾತ್ರಿ ಜೋರು ಶಬ್ದ ಕೇಳಿಬಂದಿತ್ತಂತೆ.
ಇಂದು ಬೆಳಿಗ್ಗೆ ಕೂಡ ಶಬ್ದ ಕೇಳಿಸಿದ್ದು, ಭೂಕಂಪನದ ಅನುಭವವಾಗಿದೆ ಎಂದಿದ್ಧಾರೆ.
ಪ್ರತಿ ವರ್ಷ ಮಳೆ ಬಂದಾಗಲೆಲ್ಲಾ ಜಿಲ್ಲೆಯಲ್ಲಿ ಒಂದಾಲ್ಲ ಒಂದು ಅನಾಹುತ ಆಗುತ್ತಲೇ ಇರುತ್ತದೆ.
ಅದರಂತೆ ಈ ಬಾರಿ ಕೂಡ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಬೆಳೆ ನಾಶವಾಗಿದೆ.