Earthquake in Vijayapura | ವಿಜಯಪುರದಲ್ಲಿ ಭಾರಿ ಸದ್ದಿನೊಂದಿಗೆ ಭೂಕಂಪನ
ವಿಜಯಪುರ : ವಿಜಯಪುರದಲ್ಲಿ ಬೆಳ್ಳಂಬೆಳಗ್ಗೆ ಭಾರೀ ಸದ್ದಿನೊಂದಿಗೆ ಭೂಕಂಪನವಾಗಿದೆ. ಬೆಳಗ್ಗೆ 6.22 ಕ್ಕೆ 3 ರಿಂದ 4 ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದೆ.
ಕಳೆದ ಮೂವತ್ತು ವರ್ಷದ ಇತಿಹಾಸದಲ್ಲೇ ಇಷ್ಟು ಸದ್ದು ಆಗಿರಲಿಲ್ಲ ಎಂದು ಸ್ಥಳೀರು ಹೇಳಿದ್ದಾರೆ. ಭಾರೀ ಸದ್ದಿಗೆ ವಿಜಯಪುರ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ.
ವಿಜಯಪುರದ ನಗರದ ರೇಲ್ವೆ ಸ್ಟೇಷನ್ ಏರಿಯಾ, ಗೋಳಗುಮ್ಮ ಏರಿಯಾ, ಗ್ಯಾಂಗಬಾವಡಿ, ಆಶ್ರಮ ಕಾಲೋನಿ, ಫಾರೇಖ ನಗರ, ಇಬ್ರಾಹಿಮಪುರ ಬಡಾವಣೆ, ಗಣೇಶ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಭೂಮಿ ಕಂಪಿಸಿದೆ.

ನಗರದಲ್ಲಿ 6.22 ಹಾಗೂ 6.24 ಕ್ಕೆ ಎರಡು ಬಾರಿ ಭೂಮಿ ಕಂಪಿಸಿದೆ. 6 ಗಂಟೆ 22 ನಿಮಿಷಕ್ಕೆ 4.9 ತೀವ್ರತೆಯಲ್ಲಿ ಭೂಕಂಪನವಾಗಿದ್ದರೇ 6 ಗಂಟೆ 24 ನಿಮಿಷಕ್ಕೆ 4.6 ತೀವ್ರತೆಯಲ್ಲಿ ಭೂಕಂಪನವಾಗಿದೆ.
ವಿಜಯಪುರ, ಇಂಡಿ, ಸೊಲ್ಲಾಪುರ, ಜಮಖಂಡಿ, ಬಾಗಲಕೋಟೆ, ಮುಂಬೈ, ಪುಣೆ ಭಾಗಗಳಲ್ಲಿ ಭೂಕಂಪನ ತೀವ್ರತೆ ದಾಖಲಾಗಿದೆ. 6.22 ರ ಭೂಕಂಪನ ಕೇಂದ್ರ ಮಹಾರಾಷ್ಟ್ರದ ಸಾಂಗಲಿಯಲ್ಲಿದ್ದು, 6.24ರ ಭೂಕಂಪನ ಕೇಂದ್ರ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿದೆ.