ಇಸ್ಲಾಮಾಬಾದ್ : ಭಾರತದ ಶತೃ ರಾಷ್ಟ್ರ ಪಾಕ್ ನಲ್ಲಿ ಆರ್ಥಿಕತೆ ತೀರಾ ಹದಗೆಟ್ಟಿದೆ. ಮಾರುಕಟ್ಟೆಯಲ್ಲಿ ಅಗತ್ಯವಸ್ತುಗಳ ಬೆಲೆ ದುಪ್ಪಟ್ಟಾಗಿದ್ದು, ಜನರು ಸಂಕಷ್ಟ ಪಡುವಂತಾಗಿದೆ. ಸರ್ಕಾರ ನಿಗದಿ ಮಾಡಿದ್ದರೂ ವ್ಯಾಪಾರಿಗಳು ಮಾತ್ರ ತಮಗೆ ಬೇಕಾದಂತೆ ಮಾರಾಟ ಮಾಡುತ್ತಿದ್ದಾರೆ.
ಲಾಹೋರ್ನ ಮಾರುಕಟ್ಟೆಗಳಲ್ಲಿ (Lahore Market) ಪ್ರತಿ ಡಜನ್ ಮೊಟ್ಟೆಯ ಬೆಲೆ 400 ರೂ.ಗೆ ಏರಿದೆ. ಅಲ್ಲಿಯ ಸರ್ಕಾರ ಈಗಾಗಲೇ ಆರ್ಥಿಕ ದರ ಇಳಿಸಲು ಕೆಲ ವಸ್ತುಗಳಿಗೆ ನಿಗದಿತ ದರ ಸೂಚಿಸಿದೆ. ಸರ್ಕಾರ ಸೂಚಿಸಿದ ದರವೂ ಜನರ ಕೈಗೆ ಸಿಗದಂತಾಗಿದ್ದರೂ ವ್ಯಾಪಾರಿಗಳ ಸುಲಿಗೆ ಅಲ್ಲಿನ ಜನರನ್ನು ಹೈರಾಣಾಗಿಸಿವೆ.
ಪ್ರತಿ ಕೆ.ಜಿ ಈರುಳ್ಳಿಗೆ ಸರ್ಕಾರ 175 ರೂ. ನಿಗದಿಪಡಿಸಿದ್ದರೆ. ವ್ಯಾಪಾರಿಗಳು 200 ರಿಂದ 250 ರೂ. ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಡಜನ್ ಮೊಟ್ಟೆಯ ಬೆಲೆ 400 ರೂ. ಆದರೆ, ಕೆಜಿ ಚಿಕನ್ ಬೆಲೆ 615 ರೂ.ಗಳಿಗೆ ಏರಿಕೆಯಾಗಿದೆ. ಆರ್ಥಿಕ ಹೊರೆ ಹೆಚ್ಚಾಗುತ್ತಿದ್ದು, 63,399 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಪಾಕಿಸ್ತಾನ ಮೂಲಗಳು ತಿಳಿಸಿವೆ.








