ಮಕ್ಕಳು ಸೇರಿ 41 ಮಂದಿ ಸಜೀವ ದಹನ!
ಕೈರೋ ಈಜಿಪ್ಟ್ ನ ಕಾಪ್ಟಿಕ್ ನಲ್ಲಿ ಘಟನೆ
ಘಟನೆಯಲ್ಲಿ 55ಕ್ಕೂ ಹೆಚ್ಚು ಮಂದಿಗೆ ಗಾಯ
ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ
ಕೈರೋ : ಭೀಕರ ಅಗ್ನಿ ಅವಘಡದಲ್ಲಿ 41 ಮಂದಿ ಸಜೀವ ದಹನವಾಗಿರುವ ಘಟನೆ ಕೈರೋ ಈಜಿಪ್ಟ್ ನ ಕಾಪ್ಟಿಕ್ ಚರ್ಚ್ ನಲ್ಲಿ ನಡೆದಿದೆ. ಘಟನೆಯಲ್ಲಿ 55 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇಂಬಾಬಾದ ಜನನಿಬಿಡ ಅಬು ಸೆಫೀನ್ ಎಂಬ ಚರ್ಚ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರಾಥಮಿಕ ತನಿಖೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.