ಬೆಂಗಳೂರು : ಗ್ರಾಮ ಪಂಚಾಯತಿ ಚುನಾವಣೆಗಳನ್ನು ಮುಂದೂಡಿದ ಕ್ರಮಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತಿ ಚುನಾವಣೆ ಮುಂದೂಡಿರುವುದು ಅಸಾಂವಿಧಾನಿಕವಾಗಿದೆ. ಇದು ಸಂವಿಧಾನದ 243ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಅಲ್ಲದೆ ಎಲ್ಲೆಡೆ ಮದ್ಯದ ಅಂಗಡಿಗಳನ್ನ ತೆರೆಯಲಾಗಿದೆ. ವಿಮಾನಗಳನ್ನ ಹಾರಾಟ ಶುರುವಾಗಿದೆ. ಜೊತೆಗೆ ಲಾಕ್ ಡೌನ್ ಬಹುತೇಕ ಸಡಿಲ ಮಾಡಲಾಗಿದೆ. ಆದರೆ ಗ್ರಾಮ ಪಂಚಾಯತಿ ಚುನಾವಣೆಗೆ ಮಾತ್ರ ಕೊವಿಡ್ 19 ನೆಪ ಸರ್ಕಾರ ಕೊಟ್ಟಿದೆ ಎಂದು ಸರ್ಕಾರವನ್ನು ದೂರಿದರು. ಇದೆ ವೇಳೆ ಸ್ಪೀಕರ್ ವಿರುದ್ದವೂ ಗುಡುಗಿದ ಅವರು, ಲೆಕ್ಕಪತ್ರ ಸಮಿತಿ ಹಕ್ಕನ್ನು ಸ್ಪೀಕರ್ ಮೊಟಕುಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಲೆಕ್ಕಪತ್ರ ಸಮಿತಿ ಹಕ್ಕು ಮೊಟಕುಗೊಳಿಸಿದಕ್ಕೆ ಹಕ್ಕು ಚ್ಯುತಿ ಆಗುತ್ತದೆ. ಈ ಸಂಬಂಧ ಸ್ಪೀಕರ್ ಹಕ್ಕ ಚ್ಯುತಿ ಮಂಡಿಸುತ್ತೇವೆ ಎಂದು ಹೆಚ್.ಕೆ ಪಾಟೀಲ್ ಹೇಳಿದ್ದರು.
ಕುಮಾರಸ್ವಾಮಿ ಮೊದಲು ತಮ್ಮ ರಾಜೀನಾಮೆಯ ಅಸಲಿ ಕಥೆ ಬಿಚ್ಚಿಡಲಿ: ನಿಮ್ಮ ಕುಟುಂಬ ನೈಸ್ ನಲ್ಲಿ ಎಷ್ಟು ಭೂಮಿ ಕಬಳಿಸಿದೆ? ಸೋಮಶೇಖರ್ ವಾಗ್ದಾಳಿ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ರಾಜೀನಾಮೆ ಮತ್ತು ಸ್ಟಿಂಗ್ ಆಪರೇಷನ್ ಗಳ ಮಹಾ ಸಮರ ಶುರುವಾಗಿದೆ. ಸಿದ್ದರಾಮಯ್ಯ ಅವರನ್ನು ಸ್ಟಿಂಗ್ ಆಪರೇಷನ್ ಮೂಲಕ ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿದೆ...








