ಬೆಳಗಾವಿ : ವಿದ್ಯುತ್ ಸ್ಪರ್ಶ (Electrocuted)ವಾದ ಪರಿಣಾಮ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಶಾಹುನಗರದಲ್ಲಿ (Shahunagar) ನಡೆದಿದೆ.
ರಾಮದುರ್ಗ (Ramadurga) ತಾಲೂಕಿನ ಅರಬೆಂಚಿ ತಾಂಡಾದವರೇ ಸಾವನ್ನಪ್ಪಿದ ದುರ್ದೈವಿಗಳು ಎನ್ನಲಾಗಿದ್ದು, ಅಜ್ಜ ಈರಪ್ಪಾ ಲಮಾಣಿ (50), ಅಜ್ಜಿ ಶಾಂತವ್ವ ಲಮಾಣಿ (45) ಹಾಗೂ ಮೊಮ್ಮಗಳು ಅನ್ನಪೂರ್ಣ ಲಮಾಣಿ (8) ಸಾವನ್ನಪ್ಪಿದವರು.
ಮನೆಯಲ್ಲಿ ನೀರು ಕಾಯಿಸಲು ಕಾಯಿಲ್ ಹಾಕಿದ್ದ ಸಂದರ್ಭದಲ್ಲಿ ಮೊಮ್ಮಗಳಿಗೆ (Grand Daughter) ವಿದ್ಯುತ್ ತಗುಲಿದ್ದು, ಮೊಮ್ಮಗಳನ್ನು ಕಾಪಾಡುವ ಸಲುವಾಗಿ ಅಜ್ಜ (Grandfather), ಅಜ್ಜಿ (Grandmother) ತೆರಳಿದ್ದಾರೆ. ಈ ಸಂದರ್ಭದಲ್ಲಿ ಅವರಿಗೂ ವಿದ್ಯುತ್ ಸ್ಪರ್ಶವಾಗಿದ್ದು, ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಳಗಾವಿಯ ಶಾಹುನಗರ 7ನೇ ಕ್ರಾಸ್‌ನ ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.








