BMTC : ಎಲೆಕ್ಟ್ರಿಕ್ ಬಸ್ ಗಳಿಂದ BMTC ಚಾಲಕರ ಕೆಲಸಕ್ಕೆ ಕುತ್ತು…???
ರಾಜ್ಯ ರಸ್ತೆ ಸಾರಿಗೆ ನಿಗಮಗಳು ಶಾಶ್ವತವಾಗಿ ಖಾಸಗಿಯವ್ರ ಕಪಿಮುಷ್ಠಿಯೊಳಗೆ ಸಿಲುಕುತ್ತಾ ಎನ್ನುವ ಅನುಮಾನಗಳು ಶುರುವಾಗತೊಡಗಿದೆ.. ಈಗಾಗಲೇ ಎಲೆಕ್ಟ್ರಿಕ್ ಬಸ್ ಗಳನ್ನು ರಸ್ತೆಗಿಳಿಸೋದ್ರ ಮೂಲಕ ಸಾರಿಗೆ ನಿಗಮದೊಳಗೆ ಖಾಸಗೀಕರಣದ ಭೂತವನ್ನು ಸರ್ಕಾರ ಬಿಟ್ಟಿದೆ..
ಎಲೆಕ್ಟ್ರಿಕ್ ಬಸ್ ಗಳ ಖರೀದಿಯ ಎಫೆಕ್ಟ್ ನಿಂದ ಡ್ರೈವರ್ ಗಳ ಕೆಲಸಕ್ಕೆ ಕುತ್ತು ಬಂದಿದೆ.. ಹೀಗಾಗಿ ರಾಜ್ಯ ಸಾರಿಗೆ ನಿಗಮ ಕಂಪ್ಲೀಟ್ ಆಗಿ ಖಾಸಗೀಕರಣ ಆಗಿ ಬಿಡುತ್ತಾ ಎನ್ನುವ ಾತಂಕ ಅನುಮಾನ ಕಾಡತೊಡಗಿದೆ..
ಇದಕ್ಕೆ ಪುಷ್ಟಿ ಎಂಬಂತೆ ಮೊದಲ ಹೆಜ್ಜೆಯೇ BMTC ಎಲೆಕ್ಟ್ರಿಕ್ ಬಸ್ ಗಳ ಖರೀದಿ. ಎಲೆಕ್ಟ್ರಿಕ್ ಬಸ್ ಖರೀದಿ ಮೂಲಕ ಬಿಎಂಟಿಸಿ ಒಳಗೆ ಖಾಸಗೀಕರಣ ಶುರುವಾಗಿದೆ.
ಮತ್ತೊಂದೆಡೆ ಎಲೆಕ್ಟ್ರಿಕ್ ಬಸ್ ಗಳು ಬಿಎಂಟಿಸಿ ಡ್ರೈವರ್ ಗಳ ಕೆಲಸ ಕಿತ್ತುಕೊಳ್ತಿದೆ ಎನ್ನಲಾಗ್ತಿದೆ.. ಎಲೆಕ್ಟ್ರಿಕ್ ಬಸ್ ಗಳ ಸಂಚಾರ ಬಿಎಂಟಿಸಿ ಡ್ರೈವರ್ ಗಳ ಪಾಲಿಗೆ ಕಂಟಕವಾಗುತ್ತಾ ಎನ್ನುವ ಭಯ ಶುರುವಾಗಿದೆ..
ಹಂತ ಹಂತವಾಗಿ ಡ್ರೈವರ್ ಗಳ ಕೆಲಸ ಕಿತ್ತುಕೊಳ್ಳಲಿದೆಯಾ ಅನ್ನೋ ಆತಂಕವಿದೆ… ಅಂದ್ಹಾಗೆ ಬಿಎಂಟಿಸಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನ ಖರೀದಿ ಮಾಡಿದೆ..
ಎಲೆಕ್ಟಿಕ್ ಬಸ್ ಗಳಿಗೆ ಖಾಸಗಿ ಸಂಸ್ಥೆಯಿಂದ ಡ್ರೈವರ್ ಗಳ ನೇಮಕವಾಗುತ್ತಿದೆ… ಇನ್ನೂ ಮುಂದೆ ಡಿಸೇಲ್ ಬಸ್ ಗಳ ಪರ್ಯಾಯವಾಗಿ ಎಲೆಕ್ಟ್ರಿಕ್ ಬಸ್ ಗಳನ್ನ ಬಿಎಂಟಿಸಿ ಖರೀದಿ ಮಾಡಲಿದೆ..
ಹೀಗಾಗಿ ಬಿಎಂಟಿಸಿ ಬಸ್ ಡ್ರೈವರ್ ಗಳಿಗೆ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.. ಎಲೆಕ್ಟ್ರಿಕ್ ಬಸ್ ಗಳಲ್ಲಿ ಕಂಡಕ್ಟರ್ ಮಾತ್ರ ಬಿಎಂಟಿಸಿಯವರು, ಡ್ರೈವರ್ ಖಾಸಗಿಯವರಾಗಿರಲಿದ್ದಾರೆ..
ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಬಸ್ ಗಳ ಸಂಖ್ಯೆ ಹೆಚ್ಚಳವಾದ್ರೆ ಚಾಲಕರಿಗೆ ನಿಗಮ ದಿಂದ ಗೇಟ್ ಪಾಸ್ ಸಿಗುವ ಸಾಧ್ಯತೆಯಿದ್ಯಾ ಅನ್ನೋ ಪ್ರಶ್ನೆಗಳು ಉದಯಿಸಿವೆ..
15 ಸಾವಿರ ಚಾಲಕರು ಬಿಎಂಟಿಸಿಯಲ್ಲಿ ಕೆಲಸ ಮಾಡ್ತಿದ್ದಾರೆ. ಇನ್ನೂ 300ಕ್ಕು ಹೆಚ್ಚು ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಎಂಟಿಸಿ ಮುಂದಾಗಿದೆ. ಹೆಚ್ಚುವರಿ ಎಲೆಕ್ಟ್ರಿಕ್ ಬಸ್ ಬಂದ್ರೆ ಚಾಲಕರಿಗೆ ಕಂಟಕವಾಗುತ್ತಾ ಅನ್ನೋ ಭಯ ಶುರುವಾಗಿದೆ.. ಇದ್ರಿಂದಾಗಿ ನಿಗಮಗಳಲ್ಲಿ ಹೊಸದಾಗಿ ಡ್ರೈವರ್ ಗಳ ನೇಮಕಾತಿ ಆಗುವುದು ಇನ್ಮುಂದೆ ಅನುಮಾನ ಎನ್ನಲಾಗ್ತಿದೆ..









