Elephant Retirement : ಸೇವೆಯಿಂದ ನಿವೃತ್ತಿಯಾದ ಆನೆಗೆ ಭಾವುಕ ಬೀಳ್ಕೊಡಿಗೆ ಕೊಟ್ಟ ಅರಣ್ಯ ಅಧಿಕಾರಿಗಳು…
ಸೇವೆಯಿಂದ ನಿವೃತ್ತಿಯಾದ ಆನೆಗೆ ಅರಣ್ಯ ಅಧಿಕಾರಿಗಳು ಭಾವುಕರಾಗಿ ಬೀಳ್ಕೊಡುಗೆ ಕೊಟ್ಟಿರುವ ವಿಡಿಯೋ ಜನರ ಮನಸ್ಸನ್ನ ಗೆಲ್ಲುತ್ತಿದೆ. ಈ ವಿಡಿಯೋ ಪ್ರಾಣಿಗೂ ಮಾನವನಿಗೂ ಇರುವ ಅವಿನಾಭಾವ ಸಂಬಂಧವನ್ನ ಸೂಚಿಸುತ್ತದೆ. ಸುಮಾರು 100 ರಕ್ಷಣಾ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದ ಆನೆಗೆ ಅದ್ದೂರಿಯಾಗಿ ಬೀಳ್ಕೊಡುಗೆ ನೀಡಲಾಗಿದೆ.
ಈ ಘಟನೆ ತಮಿಳುನಾಡಿನ ಆನಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯಿತು. ಸುಮಾರು 60ನೆ ವಯಸ್ಸಿನ ಕೋಜಿಯಮುಟ್ಟಿ ಆನೆ ಶಿಬಿರದ ಕುಮ್ಕಿ ಆನೆ ಕಲೀಂ ಸೇವೆಯಿಂದ ನಿವೃತ್ತಿಯಾಯಿತು. ಆನೆಯ ನಿವೃತ್ತಿ ಅಲ್ಲಿನ ಅರಣ್ಯ ಪೊಲೀಸ್ ಅಧಿಕಾರಿಗಳನ್ನು ಭಾವುಕರನ್ನಾಗಿಸಿದೆ. ಅಧಿಕಾರಿಗಳು ಆನೆಗೆ ವಂದನೆ ಸಲ್ಲಿಸಿ ಬೀಳ್ಕೊಟ್ಟಿದ್ದಾರೆ.
ಕಲೀಂ ಆನೆ 99 ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿತ್ತು. ಕಾರ್ಯಾಚರಣೆಗಳಲ್ಲಿ ಕಲೀಂ ಶ್ರಮ ಅರಣ್ಯ ಇಲಾಖೆ ಸಿಬ್ಬಂದಿಯ ಮನ ಗೆದ್ದಿತ್ತು. ಕಲೀಂ ಜನವಸತಿ ಪ್ರದೇಶಗಳಿಗೆ ನುಗ್ಗುವ ಕಾಡಾನೆಗಳನ್ನು ಓಡಿಸುವುದರಿಂದ ಹಿಡಿದು ತಮಿಳುನಾಡಿನ ವಿವಿಧ ಜಿಲ್ಲೆಗಳು ಹಾಗೂ ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಆನೆ ಹಿಡಿಯುವವರೆಗೆ 99 ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದೆ.
Our eyes are wet and hearts are full with gratitude as Kaleem the iconic Kumki elephant of the Kozhiamuttthi elephant camp in Tamil Nadu retired today at the age of 60. Involved in 99 rescue operations he is a legend. He received a guard of honour from #TNForest #Kaleem pic.twitter.com/bA1lUOQmTw
— Supriya Sahu IAS (@supriyasahuias) March 7, 2023
ತಮಿಳುನಾಡು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ಅವರು ಕಲೀಂ ಅವರಿಗೆ ಬೀಳ್ಕೊಡುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಕುಮ್ಕಿ ಆನೆ ‘ಕಲೀಂ’ ಇಂದು ನಿವೃತ್ತಿಯಾಗಿದೆ. ತಮಿಳುನಾಡಿನ ಅನಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ 99 ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ ದಂತಕಥೆ ಕಲೀಂ. ಕಲೀಂ ಅವರ ನಿವೃತ್ತಿ ನಮ್ಮ ಕಣ್ಣಲ್ಲಿ ನೀರು ತರಿಸುತ್ತದೆ. ನಮ್ಮ ಹೃದಯ ಕೃತಜ್ಞತೆಯಿಂದ ತುಂಬಿದೆ ಎಂದು ಸುಪ್ರಿಯಾ ಸಾಹು ಹೇಳಿದ್ದಾರೆ. ಅರಣ್ಯಾಧಿಕಾರಿಗಳು ಆನೆಯ ಮುಂದೆ ನಿಂತು ನಮಸ್ಕರಿಸುವುದು ಕಂಡು ಬರುತ್ತಿದೆ. ಕೂಡಲೇ ಆನೆ ಘರ್ಜಿಸಿ ಸೊಂಡಿಲನ್ನು ಮೇಲಕ್ಕೆತ್ತಿ ನಮಸ್ಕರಿಸಿದೆ.
Elephant Retirement: Forest officials gave an emotional farewell to the elephant who retired from service.