3,368 ಶತಕೋಟಿ ರೂಪಾಯಿಗಳಿಗೆ ಟ್ವೀಟರ್ ಖರೀದಿಸಿದ ಎಲಾನ್ ಮಾಸ್ಕ್
ವಿಶ್ವದ ಶ್ರೀಮಂತ ವ್ಯಕ್ತಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವಿಟರ್‌ನ ಹೊಸ ಮಾಲೀಕರಾಗಿದ್ದಾರೆ. ಟ್ವೀಟರ್ ಖರೀದಿಸಲು ಎಲಾನ್ ಮಸ್ಕ್ 44 ಬಿಲಿಯನ್ ಡಾಲರ್ , ಅಂದರೆ 3,368 ಶತಕೋಟಿ ರೂಪಾಯಿಗಳ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಟ್ವಿಟರ್‌ನ ಸ್ವತಂತ್ರ ಮಂಡಳಿ ಅಧ್ಯಕ್ಷ ಬ್ರೆಟ್ ಟೇಲರ್ ಅವರು ಭಾರತೀಯ ಕಾಲಮಾನ ಮಧ್ಯಾಹ್ನ 12.24 ಕ್ಕೆ ಪತ್ರಿಕಾ ಪ್ರಕಟಣೆಯಲ್ಲಿ ಮಸ್ಕ್ ಜೊತೆಗಿನ ಒಪ್ಪಂದದ ಬಗ್ಗೆ ಮಾಹಿತಿ ನೀಡಿದರು.
ಟ್ವಿಟರ್‌ನ ಪ್ರತಿ ಷೇರಿಗೆ ಎಲಾನ್ ಮಸ್ಕ್ $ 54.20 (ರೂ. 4,148) ಪಾವತಿಸುತ್ತಿದ್ದಾರೆ. ಮಸ್ಕ ಈಗಾಗಲೇ ಟ್ವಿಟರ್‌ನಲ್ಲಿ 9% ಪಾಲನ್ನು ಹೊಂದಿದ್ದಾರೆ. ಇತ್ತೀಚಿನ ಒಪ್ಪಂದದ ನಂತರ ಕಂಪನಿಯಲ್ಲಿ 100% ಷೇರು ಹೊಂದಿದ್ದು Twitter ಅವರ ಖಾಸಗಿ ಕಂಪನಿಯಾಗಲಿದೆ.
ಟ್ವಿಟರ್ ತನ್ನ ಸಾಮಾಜಿಕ ಜಾಲತಾಣ ಕಂಪನಿಯನ್ನು ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್‌ಗೆ 44 ಬಿಲಿಯನ್ ಡಾಲರ್ ಒಪ್ಪಂದದಲ್ಲಿ ಮಾರಾಟ ಮಾಡುವುದಾಗಿ ಘೋಷಿಸಿದೆ.
CNN ನ ವರದಿಯ ಪ್ರಕಾರ, ಟ್ವೀಟರ್ Elon Musk ಒಡೆತನದ ಕಂಪನಿಯಾದ ನಂತರ, Twitter ನ ಎಲ್ಲಾ ಷೇರುದಾರರು $ 54.20 ಅಂದರೆ ಪ್ರತಿ ಷೇರಿಗೆ 4,148 ರೂಪಾಯಿಗಳನ್ನು ಪಡೆಯುತ್ತಾರೆ.