Bengaluru: ಸುಸ್ಥಿರ ಗಣಿಗಾರಿಕೆಗೆ ಒತ್ತು ನೀಡಲಾಗುವುದು : ಸಿಎಂ ಬೊಮ್ಮಾಯಿ

1 min read
CM Bommai Saaksha Tv

ಸುಸ್ಥಿರ ಗಣಿಗಾರಿಕೆಗೆ ಒತ್ತು ನೀಡಲಾಗುವುದು : ಸಿಎಂ ಬೊಮ್ಮಾಯಿ

ಬೆಂಗಳೂರು : ಸುಸ್ಥಿರ ಗಣಿಗಾರಿಕೆಯಿಂದ ಮುಂದಿನ 50 ವರ್ಷಗಳಲ್ಲಿ ಖನಿಜ ಬಳಕೆ ಮತ್ತು ಅರಣ್ಯ ಸಂಪತ್ತು ಬೆಳಸಲು ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೊರೇಷನ್​ಗೆ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್​​​ನಲ್ಲಿ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್​​​​ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣಿಗಾರಿಕೆಯಿಂದ ಪ್ರಕೃತಿಯ ಮೇಲೆ ಆಗುವ ದಾಳಿಯನ್ನು ತಡೆಯಬೇಕಾಗಿದೆ. ಹಂತ-ಹಂತವಾಗಿ ಖನಿಜ ಬಳಕೆ ಹಾಗೂ ಅರಣ್ಯಗಳನ್ನು ಬೆಳಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಅಲ್ಲದೇ ಪರಿಸರ ಸಂರಕ್ಷಣೆಯ ಜೊತೆ ಜೊತೆಗೆ ಖನಿಜ, ಮರಳು,ಕಲ್ಲು, ಕಬ್ಬಿಣ ಅದಿರುಗಳ ಸಮತೋಲಿತ ಬಳಕೆ ಬಗ್ಗೆ ಗಮನಹರಿಸಬೇಕು. ಪರಿಸರಕ್ಕೆ ಹಾನಿಯಾಗದಂತೆ ವೈಜ್ಞಾನಿಕ ರೀತಿಯಲ್ಲಿ ಗಣಿಗಾರಿಕೆ ಮಾಡಬೇಕು. ಇನ್ನೂ 2022-23ರ ಆಯವ್ಯಯದಲ್ಲಿ ಅರಣ್ಯ ಜೀವಿಶಾಸ್ತ್ರ ವ್ಯವಸ್ಥೆಯ ಮೇಲಾಗಿರುವ ದಾಳಿಯ ದುಷ್ಪರಿಣಾಮವನ್ನು ಸರಿದೂಗಿಸಲು ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಹಸಿರು ಆಯವ್ಯಯ ರೂಪಿಸಿ 100 ಕೋಟಿ ರೂ  ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.

ನಿಸರ್ಗ ಮತ್ತು ಮನುಷ್ಯ ಸೃಷ್ಟಿಯ ಭಾಗ. ಗಣಿಗಾರಿಕೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಈಗಿನ ತಂತ್ರಜ್ಞಾನದಿಂದ ಉಪಯುಕ್ತ ಸಂಪತ್ತಾಗಿ ಪರಿಣಮಿಸಿದೆ.ಗಣಿಗಾರಿಕೆಗೆ ದೊಡ್ಡ ಇತಿಹಾಸವಿದೆ. ಹಿಂದಿನವರು ನಿಸರ್ಗದ ಗಣಿ ಸಂಪತ್ತನ್ನು ಉಳಿಸಿಕೊಂಡು ಬಂದಿದ್ದಾರೆ. ಭವಿಷ್ಯದ ಜನಾಂಗಕ್ಕೆ ಈ ಸಂಪತ್ತನ್ನು ಕಾಪಾಡಬೇಕಿದೆ. ಆದ್ದರಿಂದ ಸುಸ್ಥಿರ ಗಣಿಗಾರಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd