ಖಾದ್ಯ ತೈಲ ಬೆಳೆಗಳನ್ನ ಬೆಳೆಯಲು ಕೇಂದ್ರದಿಂದ ಉತ್ತೇಜನ
ದೇಶದಲ್ಲಿ ಖಾದ್ಯ ತೈಲ ಬೆಳೆಗಳನ್ನು ಹೆಚ್ಚು ಬೆಳೆಯಲು ರೈತರನ್ನು ಉತ್ತೇಜಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ರಾಜ್ಯಸಭೆಗಿಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಅವರು ಉಕ್ರೇನ್ ನಲ್ಲಿ ಸೂರ್ಯಕಾಂತಿ ಬೆಳೆಯನ್ನು ಹೆಚ್ಚು ಬೆಳೆಯಲಾಗುತ್ತದೆ. ಭಾರತದಲ್ಲಿ ಖಾದ್ಯ ತೈಲ ಬೆಳೆಗಳ ಪೈಕಿ ಸೂರ್ಯಕಾಂತಿಯನ್ನು ಕಡಿಮೆ ಬೆಳೆಯಲಾಗುತ್ತಿದೆ.
ಸದ್ಯ ಉಕ್ರೇನ್ – ರಷ್ಯಾ ನಡುವಿನ ಸಂಘರ್ಷದಿಂದ ಇಡೀ ವಿಶ್ವದಲ್ಲೇ ಖಾದ್ಯ ತೈಲಗಳ ಬೆಲೆ ಏರಿಕೆಯಾಗಿದೆ. ದೇಶದಲ್ಲಿ ಈ ಹಂಗಾಮಿನಲ್ಲಿ ದಾಖಲೆಯ ಸಾಸಿವೆ ಬೆಳೆಯಲಾಗಿದೆ. ಇದರಿಂದ ಖಾದ್ಯ ತೈಲಗಳ ಬೆಳೆಗಳಲ್ಲಿ ಕಡಿಮೆಯಾಗುವ ನಿರೀಕ್ಷೆಯಿದೆ. ಖಾದ್ಯ ತೈಲ ವಿಷಯದಲ್ಲಿ ಆಮದು ಅವಲಂಬಿಸದೆ ದೇಶೀಯವಾಗಿ ಖಾದ್ಯ ಬೆಳೆಗಳನ್ನು ಹೆಚ್ಚು ಬೆಳೆಯಲು ರೈತರನ್ನು ಪ್ರೋತ್ಸಾಹಿಸಲಾಗುವುದು ಎಂದರು.