ಅಫ್ಘಾನಿಸ್ತಾನದಲ್ಲಿ ನಡೆಯುತ್ತಿದ್ದ 19 ವರ್ಷಗಳ ಕದನಕ್ಕೆ ಕೊನೆಗೂ ವಿರಾಮ ಸಿಕ್ಕಿದೆ. 2001ರಿಂದ ಅಫ್ಘಾನ್ ನೆಲದಲ್ಲಿ ತಾಲಿಬಾನ್ ಉಗ್ರರು ಮತ್ತು ಅವರನ್ನು ಹಿಮ್ಮೆಟ್ಟಿಸಲು ಅಮೆರಿಕ ನಡೆಸುತ್ತಿದ್ದ ಕದನಕ್ಕೆ ತೆರೆ ಬಿದ್ದಿದೆ. ಅಫ್ಘಾನ್ ನೆಲದಲ್ಲಿ ರಕ್ತಪಾತಕ್ಕೆ ಕಾರಣರಾಗಿದ್ದ ತಾಲಿಬಾನ್ ಉಗ್ರರು ಮತ್ತು ಅವರೊಡನೆ ಕದನ ನಿರತರಾಗಿದ್ದ ಅಮೆರಿಕದ ನಡುವೆ ಶಾಂತಿ ಒಪ್ಪಂದ ಏರ್ಪಟ್ಟು, ಹಂತ ಹಂತವಾಗಿ ಅಮೆರಿಕ ಮುಂದಿನ 14 ತಿಂಗಳುಗಳಲ್ಲಿ ವಾಪಸ್ ಹೋಗಲಿದೆ.
ಅಫ್ಘಾನಿಸ್ತಾನದಲ್ಲಿರುವ ಅಮೆರಿಕದ ರಾಯಭಾರಿ ಝಲ್ಮಯ್ ಖಲೀಜಾದ್ ಹಾಗೂ ತಾಲಿಬಾನ್ ನ ನಾಯಕರ ಪ್ರತಿನಿಧಿ ಮುಲ್ಲಾ ಅಬ್ದುಲ್ ಘನಿ ಬರಾದಾರ್, ಕತಾರ್ ರಾಜಧಾನಿ ದೋಹಾದಲ್ಲಿನ ಶೆರಟಾನ್ ಹೊಟೇಲ್ ನಲ್ಲಿ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ಶಿಂಗ್ಲಾ ಸೇರಿದಂತೆ ಪಾಕಿಸ್ತಾನ, ಇಂಡೋನೇಷ್ಯಾ ಸಹಿತ 30 ದೇಶಗಳ ಪ್ರತಿನಿಧಿಗಳು, ವಿಶ್ವಸಂಸ್ಥೆಯ ಸದಸ್ಯರು ಈ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಾಕ್ಷಿಯಾದರು.
ದಿನ ಭವಿಷ್ಯ (09-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
ದಿನ ಭವಿಷ್ಯ : 09-05-2026 ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಅತ್ಯಂತ ಕಾರ್ಯನಿರತ ದಿನವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಹಿರಿಯ...








