ENG vs WI | 145 ವರ್ಷಗಳ ದಾಖಲೆ ಉಡೀಸ್.. ಇತಿಹಾಸದಲ್ಲಿ ಇದು 2ನೇ ಬಾರಿ
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇಂಗ್ಲೆಂಡ್ ಬೌಲರ್ಗಳಾದ ಜಾಕ್ ಲೀಚ್ ಮತ್ತು ಶಕೀಬ್ ಮಹಮೂದ್ 145 ವರ್ಷಗಳ ದಾಖಲೆಯನ್ನ ಉಡೀಸ್ ಮಾಡಿದ್ದಾರೆ.
ಮೊದಲ ದಿನದ ಆಟದಲ್ಲಿ ಇಂಗ್ಲೆಂಡ್ ತಂಡ ವಿಂಡೀಸ್ ಬೌಲರ್ಗಳ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿತ್ತು.
ಆರಂಭಿಕ ಅಲೆಕ್ಸ್ ಲೀಸ್ (31) ಹೊರತುಪಡಿಸಿ ಉಳಿದ ಅಗ್ರ ಕ್ರಮಾಂಕ, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ಒಂದೇ ಅಂಕೆಗೆ ಸೀಮಿತರಾದ್ರು.
ಈ ಹಂತದಲ್ಲಿ ಇಂಗ್ಲೆಂಡ್ 67 ರನ್ ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಕ್ರಿಸ್ ವೋಕ್ಸ್ (25) ಹಾಗೂ ಕ್ರೇಗ್ ಓವರ್ ಟನ್ (14) ಇಂಗ್ಲೆಂಡ್ ತಂಡಕ್ಕೆ ಚೇತರಿಕೆ ನೀಡಿದರು.
ಆದರೆ, ಇವರಿಬ್ಬರು ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು, ಆಗ ಇಂಗ್ಲೆಂಡ್ 9 ವಿಕೆಟ್ ಗೆ 114 ರನ್ ಗಳಿಸಿತ್ತು.
ಈ ಹಂತದಲ್ಲಿ 10ನೇ ಕ್ರಮಾಂಕದ ಬ್ಯಾಟ್ಸ್ ಮನ್ ಜಾಕ್ ಲೀಚ್ (ಔಟಾಗದೆ 41) ಮತ್ತು ಶಕೀಬ್ ಮಹಮೂದ್ (49) ಕೊನೆಯ ವಿಕೆಟ್ ಗೆ ದಾಖಲೆಯ 90 ರನ್ ಸೇರಿಸಿದರು.
ಇಂಗ್ಲೆಂಡ್ 89.4 ಓವರ್ಗಳಲ್ಲಿ 204 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಇಬ್ಬರೂ ಸೇರಿ 145 ವರ್ಷಗಳ ಇತಿಹಾಸವನ್ನು ಮತ್ತೆ ಬರೆದಿದ್ದಾರೆ. 10 ಮತ್ತು 11ನೇ ಬ್ಯಾಟ್ಸ್ಮನ್ಗಳು ಅಂತಿಮ ವಿಕೆಟ್ಗೆ ಹೆಚ್ಚು ರನ್ ಸೇರಿಸಿದ್ದು ಇದು ಎರಡನೇ ಬಾರಿ.
ಇದಕ್ಕೂ ಮುನ್ನ 1885ರಲ್ಲಿ ಆಸೀಸ್ ವಿರುದ್ಧ ಸಿಡ್ನಿಯಲ್ಲಿ ನಡೆದ ಟೆಸ್ಟ್ನಲ್ಲಿ ಇಂಗ್ಲೆಂಡ್ನ ಟಾಮ್ ಗ್ಯಾರೆಟ್ ಮತ್ತು ಎಡ್ವಿನ್ ಇವಾನ್ಸ್ ಅಂತಿಮ ವಿಕೆಟ್ಗೆ 81 ರನ್ ಸೇರಿಸಿದ್ದರು.eng-vs-wi-england-10-11th-batters-break-145-year-test-record