ಗದಗ: ವ್ಯಕ್ತಿಯೊಬ್ಬರು ಪಾರ್ಟ್ ಟೈಮ್ ಜಾಬ್ ಸಿಗುತ್ತದೆ ಎಂಬ ಆಸೆಗೆ 39 ಲಕ್ಷ ರೂ. ಕಳೆದುಕೊಂಡಿರುವ ಘಟನೆಯೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಅನಕ್ಷರಸ್ಥರು ಮೋಸ ಹೋಗಬಹುದು. ಆದರೆ, ಇಲ್ಲ ಅಕ್ಷರಸ್ಥರೇ ಮೋಸ ಹೋಗಿದ್ದಾರೆ. ಮಿಸ್ ಆನಿಕಾ ಎಂಬವರು ಕಳುಹಿಸಿದ ಪಾರ್ಟ್‌ಟೈಮ್ ಜಾಬ್ ಆಫರ್‌ನ ಮೆಸೇಜ್ ನಂಬಿ ಇಂಜಿನಿಯರ್ ಒಬ್ಬರು ಬರೋಬ್ಬರಿ 39 ಲಕ್ಷದ 15 ಸಾವಿರ ರೂ.ಗಳನ್ನು ಕಳೆದುಕೊಂಡಿದ್ದಾರೆ.
ನಗರದ ಹುಡ್ಕೋ ಕಾಲೋನಿಯ ಸಂದೀಪ ತಂದೆ ರಂಗನಗೌಡ ಪಾಟೀಲ ಎಂಬ ಇಂಜಿನಿಯರ್ ಆಗಸ್ಟ್ 4ರಿಂದ 8ರ ವರೆಗೆ ತಮಗೆ 9593989404 ಈ ನಂಬರ್ ನಿಂದ ಮಿಸ್ ಆನಿಕಾ ಎಂಬುವರು ವಾಟ್ಸ್‌ಅಪ್‌ನಲ್ಲಿ ಪಾರ್ಟ್‌ಟೈಮ್ ಜಾಬ್ ಆಫರ್‌ನ ಸಂದೇಶ ಕಳುಹಿಸಿದ್ದಾರೆ.
ನಂತರ ಲಿಯಾ @Lia9913, ಕಿರಣರಾವ್@KiranRao01231311 ನತಾಶಾ@NT13454 ಮತ್ತು ಕಿಶೋರ್ @Kishore55031 ಎಂಬುವರು ವಿವಿಧ ಟಾಸ್ಕ್ ನೀಡಿ 20ಲಕ್ಷದ 24ಸಾವಿರದ, 800ರೂ.ಗಳನ್ನು ಅಕೌಂಟ್‌ನಲ್ಲಿ ಹಾಕಿದ್ದಾರೆ. ವಿತ್‌ಡ್ರಾ ಮಾಡಲು ಹೋದಾಗ ಅಕೌಂಟ್ ತಡೆಹಿಡಿದು ಅನ್ಪ್ರೀಜ್ ಮಾಡಲು ಹಂತ-ಹಂತವಾಗಿ 39ಲಕ್ಷ, 15 ಸಾವಿರಗಳನ್ನು ಹಾಕಿಸಿಕೊಂಡು ಇನ್ನೂ ಐದು ಲಕ್ಷ ರೂ. ಹಾಕಬೇಕು ಎಂದು ಮೆಸೇಜ್ ಕಳುಹಿಸಿ ಇಂಜಿನಿಯರ್ ಗೆ ಮೋಸ ಮಾಡಿದ್ದಾರೆ. ಈ ಕುರಿತು ಇಂಜಿನಿಯರ್ ದೂರು ದಾಖಲಿಸಿದ್ದಾರೆ.








