ಕೋವಿಡ್ ಭೀತಿ – ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯ ರದ್ದು..!

1 min read

ಕೋವಿಡ್ ಭೀತಿ – ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯ ರದ್ದು..!

ಮ್ಯಾಂಚೆಸ್ಟರ್ : ಟೀಂ ಇಂಡಿಯಾ ಕೋಚ್‌ಗಳಾದ ರವಿ ಶಾಸ್ತ್ರಿ, ಭರತ್ ಅರುಣ್ ಹಾಗೂ ಆರ್ ಶ್ರೀಧರ್‌ಗೆ  ಕೋವಿಡ್ ದೃಢ ಪಟ್ಟ ನಂತರವೂ ಕ್ರಿಕೆಟ್ ಪಂದ್ಯಾವಳಿ ಮುಂದುವರೆದಿತ್ತು. ಆದ್ರೀಗ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯಕ್ಕೆ ಕೋವಿಡ್ ವಿಘ್ನ ಉಂಟು ಮಾಡಿದೆ.  ಟೀಂ ಇಂಡಿಯಾದ ಮತ್ತೊರ್ವ ಸಹಾಯಕ ಸಿಬ್ಬಂದಿಗೆ ಕೊರೋನಾ ದೃಢಪಟ್ಟ ಹಿನ್ನೆಲೆ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯವನ್ನ  ರದ್ದು ಮಾಡಲಾಗಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ 5ನೇ ಮತ್ತು ಅಂತಿಮ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಶುಕ್ರವಾರ ಮಧ್ಯಾಹ್ನ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಈ ಸುದ್ದಿಯನ್ನು ದೃಢಪಡಿಸಿದೆ.

ಓವಲ್ ಟೆಸ್ಟ್ ಪಂದ್ಯದ ವೇಳೆ ಮೂವರು ತರಬೇತುದಾರರು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇದೀಗ ಮ್ಯಾಂಚೆಸ್ಟರ್ ತಲುಪಿದ ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿಗೆ ಕೊರೋನಾ ದೃಢಪಟ್ಟಿದೆ. ಅಲ್ಲದೇ ಟೀಂ ಇಂಡಿಯಾದ ಎಲ್ಲಾ ಆಟಗಾರರು ಸಹಾಯಕ ಸಿಬ್ಬಂದಿಯ ನೇರ ಸಂಪರ್ಕಕ್ಕೆ ಬಂದಿರುವ ಕಾರಣ ಆತಂಕ ಹೆಚ್ಚಾಗಿದ್ದು ಅಭ್ಯಾಸ ರದ್ದು ಮಾಡಲಾಗಿದೆ. ಆದ್ರೆ ಯಾವುದೇ ಆಟಗಾರರಲ್ಲಿ ಕೊರೊನಾ ಕಾಣಿಸಿಕೊಂಡಿಲ್ಲ ಎನ್ನಲಾಗಿದೆ. ಆದ್ರೆ ಸಿಬ್ಬಂದಿಗೆ ಕೊರೋನಾ ಕಾಣಿಸಿಕೊಂಡ ಹಿನ್ನೆಲೆ ಟೀಂ ಇಂಡಿಯಾ ಆಟಗಾರರು ಮತ್ತೆ ಕೊರೊನಾ  ಪರೀಕ್ಷೆಗೆ ಒಳಪಡಬೇಕಾಗಿದೆ.

ಬರ್ತ್ ಡೇ ಸಂಭ್ರಮದಲ್ಲಿ ಮನೀಷ್ ಪಾಂಡೆ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd