ಐರ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‍ಗೆ ಸುಲಭ ಜಯ
ಐರ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಸುಲಭ ಜಯ ದಾಖಲಿಸಿದೆ. ಸೌತಾಂಪ್ಟನ್ ನಲ್ಲಿ ನಡೆದ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಆರು ವಿಕೆಟ್‍ಗಳಿಂದ ಐರ್ಲೆಂಡ್ ತಂಡವನ್ನು ಪರಾಭವಗೊಳಿಸಿತ್ತು.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಐರ್ಲೆಂಡ್ ಬ್ಯಾಟ್ಸ್ ಮೆನ್‍ಗಳನ್ನು ಇಂಗ್ಲೆಂಡ್ ಬೌಲರ್‍ಗಳು ಕಟ್ಟಿ ಹಾಕಿದ್ರು. ಪರಿಣಾಮ 44.4 ಓವರ್ ಗಳಲ್ಲಿ ಐರ್ಲೆಂಡ್ 172 ರನ್ ಗಳಿಗೆ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡಿತ್ತು. ಐರ್ಲೆಂಡ್ ತಂಡದ ಪರ ಕ್ಯಾಂಫರ್ ಅಜೇಯ 59 ರನ್ ದಾಖಲಿಸಿದ್ರೆ, ಮೆಕ್ ಬ್ರಿನ್ 40 ರನ್ ಗಳಿಸಿದ್ರು. ಇಂಗ್ಲೆಂಡ್ ವೇಗಿ ಡೇವಿಡ್ ವಿಲ್ಲೆ ಅವರು 30 ರನ್‍ಗೆ ಐದು ವಿಕೆಟ್ ಕಬಳಿಸಿದ್ರು.
ಸುಲಭ ಸವಾಲನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಆರಂಭಿಕ ಬೇರ್‍ಸ್ಟೋವ್ 2 ರನ್‍ಗೆ ತನ್ನ ಹೋರಾಟವನ್ನು ಮುಗಿಸಿದ್ರೆ, ಜೇಸನ್ ರಾಯ್ 24 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು,. ಬಳಿಕ ಜೆ,ಎಂ. ವಿನ್ಸಿ 11 ಮತ್ತು ಬಂಟನ್ 11 ರನ್ ಗಳಿಸಿ ನಿರಾಸೆ ಅನುಭವಿಸಿದ್ರು.
ಬಳಿಕ ಬಿಲ್ಲಿಂಗ್ಸ್ ಮತ್ತು ನಾಯಕ ಇಯಾನ್ ಮೊರ್ಗಾನ್ ನಾಲ್ಕನೇ ವಿಕೆಟ್‍ಗೆ 86 ರನ್‍ಗಳ ಜೊತೆಯಾಟವನ್ನು ಆಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಸ್ಯಾಮ್ ಬಿಲ್ಲಿಂಗ್ಸ್ 54 ಎಸೆತಗಳಲ್ಲಿ 11 ಬೌಂಡರಿಗಳ ಸಹಾಯದಿಂದ ಅಜೇಯ 67 ರನ್ ಗಳಿಸಿದ್ರೆ, ನಾಯಕ ಇಯಾನ್ ಮೊರ್ಗಾನ್ 40 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‍ಗಳ ನೆರವಿನಿಂದ ಅಜೇಯ 36 ರನ್ ದಾಖಲಿಸಿದ್ರು. ಅಮೋಘ ಬೌಲಿಂಗ್ ದಾಳಿ ಸಂಘಟಿಸಿದ್ದ ಡೇವಿಡ್ ವಿಲ್ಲೆ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.