T20 World Cup | ವಿಶ್ವಕಪ್ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್ ಕಾದಾಟ

1 min read
T20 World Cup

ಹಳೆಯ ವೈರಿಗಳು, ಹೊಸ ಜಾಗ- ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್ ಕಾದಾಟ

ವೈರತ್ವ ಹಳೆಯದು. ಆದರೆ ಜಾಗ ಮಾತ್ರ ಹೊಸತು. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಏಕದಿನ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು.

ಟೈ ಆಗಿದ್ದ ಪಂದ್ಯದಲ್ಲಿ ಬೌಂಡರಿ ಕೌಂಟ್ ಆಧಾರದಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಿತ್ತು.

ಈಗ ಏಕದಿನ ವಿಶ್ವಕಪ್ನ ಚಾಂಪಿಯನ್ ಮತ್ತು ರನ್ನರ್ ಅಪ್ ನಡುವೆ ಟಿ20 ವಿಶ್ವಕಪ್ನ ಸೆಮಿಫೈನಲ್ ಪಂದ್ಯ ನಡೆಯುತ್ತಿದೆ.

ಅಬುದಾಭಿ ಮೈದಾನದಲ್ಲಿ ಚುಟುಕು ಕ್ರಿಕೆಟ್ ರೋಚಕ ಹೋರಾಟ ನಡೆಯಲಿದೆ.

ಎರಡೂ ತಂಡಗಳ ಬಲಾಬಲ ಸಮಾನಾಗಿಯೇ ಇದೆ. ಇಂಗ್ಲೆಂಡ್ನ ಬ್ಯಾಟಿಂಗ್ಗೆ ನ್ಯೂಜಿಲೆಂಡ್ನ ಬೌಲಿಂಗ್ ಸವಾಲಾಗಬಹುದು.

T20 World Cup

ನ್ಯೂಜಿಲೆಂಡ್ ಬ್ಯಾಟಿಂಗ್ ಧೈತ್ಯರನ್ನು ಇಂಗ್ಲೆಂಡ್ ಬೌಲರ್ಗಳು ಕಟ್ಟಿಹಾಬಲ್ಲರು. ಆದರೆ ಫೀಲ್ಡಿಂಗ್ ವಿಷಯಕ್ಕೆ ಬಂದಾಗ ಮಾತ್ರ ನ್ಯೂಜಿಲೆಂಡ್ ಒಂದು ಕೈ ಮೇಲೆಯೇ ಇರಲಿದೆ.

ಹೀಗಾಗಿ ಎರಡೂ ತಂಡಗಳ ನಡುವೆ ರಣ ರೋಚಕ ಪಂದ್ಯ ನಡೆಯಲಿದೆ.

ಇಂಗ್ಲೆಂಡ್ನ ಬ್ಯಾಟಿಂಗ್ಗೆ ಜೇಸನ್ ರಾಯ್ ಅನುಮಪಸ್ಥಿತಿ ಕಾಡಲಿದೆ. ರಾಯ್ ಬದಲಿಗೆ ಜೇಮ್ಸ್ ವಿನ್ಸ್ ತಂಡ ಸೇರಿಕೊಂಡಿದ್ದಾರೆ.

ಉಳಿದಂತೆ ಜೋಸ್ ಬಟ್ಲರ್, ಜಾನಿ ಬೇರ್ಸ್ಟೋವ್, ಡೇವಿಡ್ ಮಲಾನ್ ಟಾಪ್ ಆರ್ಡರ್ನಲ್ಲಿ ರನ್ಮಳೆಗೈದರೆ ಕೆಲಸ ಸುಲಭವಾಗುತ್ತದೆ.

ಇಯಾನ್ ಮೊರ್ಗಾನ್, ಲಿಯಂ ಲಿವಿಂಗ್ ಸ್ಟೋನ್ ಮತ್ತು ಮೊಯಿನ್ ಆಲಿ ಇಂಗ್ಲೆಂಡ್ನ ಬ್ಯಾಟಿಂಗ್ಗೆ ಭದ್ರತೆ ನೀಡುತ್ತಾರೆ.

ಬೌಲಿಂಗ್ನಲ್ಲೂ ಅಂತ ಇಶ್ಯು ಇಲ್ಲ. ಕ್ರಿಸ್ವೋಕ್ಸ್, ಮಾರ್ಕ್ವುಡ್ ಮತ್ತು ಕ್ರಿಸ್ ಜೊರ್ಡಾನ್ ಜೊತೆ ಆದಿಲ್ ರಶೀದ್ ಟ್ರಂಪ್ಕಾರ್ಡ್ ಸ್ಪಿನ್ನರ್ಗಳು.

ಮೊಯಿನ್ ಅಲಿ ಮತ್ತು ಲಿವಿಂಗ್ ಸ್ಟೋನ್ ಐದನೇ ಬೌಲರ್ ಕಾರ್ಯ ಮಾಡುತ್ತಿದ್ದಾರೆ.

ನ್ಯೂಜಿಲೆಂಡ್ ಬ್ಯಾಟಿಂಗ್ ಡೆಪ್ತ್ ಚೆನ್ನಾಗಿದೆ. ಮಾರ್ಟಿನ್ ಗಪ್ಟಿಲ್, ಡೆರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ ಮತ್ತು ಡೆವೊನ್ ಕಾನ್ವೆ ಆಟ ತುಂಬಾ ಇಂಪಾರ್ಟೆಂಟ್.

ಗ್ಲೆನ್ ಫಿಲಿಪ್ಸ್ ಮತ್ತು ಜೇಮ್ಸ್ ನಿಶಾಮ್ ಆಲ್ರೌಂಡರ್ಗಳು. ಟಿಮ್ ಸೌಥಿ, ಟ್ರೆಂಟ್ ಬೊಲ್ಟ್ ಮತ್ತು ಆ್ಯಡಂ ಮಿಲ್ನೆ ಫಾಸ್ಟ್ ಬೌಲರ್ಗಳು.

ಈಶ್ ಸೋಧಿ ಮತ್ತು ಮಿಚೆಲ್ ಸ್ಯಾಂಟ್ನರ್ ಸ್ಪಿನ್ ಬೌಲಿಂಗ್ ಅಸ್ತ್ರಗಳು.

ಅಬುಧಾಭಿ ಪಿಚ್ ರನ್ ಭೂಮಿ ಅನ್ನುವುದು ಹಿಂದಿನ ಪಂದ್ಯದಲ್ಲಿ ಗೊತ್ತಾಗಿದೆ.

ಎರಡೂ ತಂಡಗಳಲ್ಲೂ ರನ್ ಬೇಟೆಗಾರರು ಇದ್ದಾರೆ.

ಹೀಗಾಗಿ ಹಳೇಯ ವೈರಿಗಳ ಮಧ್ಯೆ ಹೊಸ ಜಾಗದಲ್ಲಿ ಮತ್ತೊಂದು ರಣ ರೋಚಕ ಪೈಟ್ ನಡೆಯುವುದು ಗ್ಯಾರೆಂಟಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd