ಪಾಕಿಸ್ತಾನ ಸಂಬಂದವಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಂದ ಖಡಕ್ ಹೇಳಿಕೆ ಹೊರಬಿದ್ದಿದೆ. ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಏನೇ ಕ್ರಮ ಕೈಗೊಂಡರೆ ನಾವು ಬೆಂಬಲ ನೀಡುತ್ತೇವೆ, ಆದರೆ ಖಾಲಿ ಮಾತುಗಳಿಂದ ಏನು ಆಗಲ್ಲ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ತೀಕ್ಷ್ಣ ಸಂದೇಶವನ್ನು ಅವರು ನೀಡಿದ್ದಾರೆ.
ಖರ್ಗೆಯ ಕಿಡಿ – ಪಾಕ್ ವಿರುದ್ಧ ಕಠಿಣ ನಿಲುವು ಅಗತ್ಯ:
ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ (AICC) ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ನಮ್ಮ ದೇಶವನ್ನು ಕೆಣಕಿದ್ರೆ ನಾವು ಸುಮ್ಮನಿರೋದು ಸರಿಯಲ್ಲ. ಪಾಕಿಸ್ತಾನದ ವಿರುದ್ಧ ತಕ್ಷಣದ ಕ್ರಮ ಅಗತ್ಯ. ದೇಶದ ಐಕ್ಯತೆ ಮತ್ತು ಭದ್ರತೆಗಾಗಿ ಕೇಂದ್ರ ಸರ್ಕಾರ ಯಾವ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.
ಆದರೆ ಬರೀ ಭಾಷಣದಿಂದ ಏನು ಪ್ರಯೋಜನ? ಎಂದು ಹೇಳಿದ ಅವರು, ಸಂಪೂರ್ಣ ದೇಶ ಭದ್ರತೆ ಬಗ್ಗೆ ಚಿಂತಿಸುತ್ತಿದೆ. ಇಂಥ ಸಂದರ್ಭಗಳಲ್ಲಿ ಕೇವಲ ಭಾಷಣ ಮಾಡಿಕೊಂಡು ಕುಳಿತರೆ ಆಗಲ್ಲ. ಕಠಿಣ ನಿರ್ಧಾರ ತೆಗೆದುಕೊಂಡರೆ ಮಾತ್ರ ಶಕ್ತಿ ತೋರಿಸಲು ಸಾಧ್ಯ ಎಂದಿದ್ದಾರೆ.
ರಾಜಕೀಯ ಮೀರಿ ದೇಶ ಪ್ರಥಮ:
ನಾವು ಕಾಂಗ್ರೆಸ್‌ನವರಾಗಿರಬಹುದು, ಆದರೆ ನಮಗೆ ದೇಶ ಮೊದಲು ಮುಖ್ಯ. ದೇಶದ ಹಿತಕ್ಕಾಗಿ ಸರ್ಕಾರ ಸರಿಯಾದ ಕ್ರಮ ಕೈಗೊಂಡರೆ ನಾವು ರಾಜಕೀಯ ವಿರೋಧವನ್ನು ಬದಿಗಿಟ್ಟು ಬೆಂಬಲಿಸುತ್ತೇವೆ ಎಂದು ಖರ್ಗೆ ಸ್ಪಷ್ಟಪಡಿಸಿದರು.








