ಭಾರತಕ್ಕೆ ಅಮೆರಿಕಾದ ಹೊಸ ರಾಯಭಾರಿಯಾಗಿ ಎರಿಕ್ ಗಾರ್ಸೆಟ್ಟಿ ನೇಮಕ
ಅಮೆರಿಕಾ : ಲಾಸ್ ಏಂಜಲೀಸ್ ಮೇಯರ್ ಎರಿಕ್ ಗಾರ್ಸೆಟ್ಟಿ ಭಾರತದ ನೂತನ ಅಮೆರಿಕ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಅವರನ್ನ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಭಾರತದ ನೂತನ ರಾಯಭಾರಿಯಾಗಿ ನೇಮಕ ಮಾಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಸೆನೆಟ್ ಸಮ್ಮತಿ ದೃಡಿಕರಣ ಪಡೆದರೆ ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅಧ್ಯಯನ ಮಾಡಿದ 50 ವರ್ಷದ ಗಾರ್ಸೆಟ್ಟಿ 2021 ರ ಜನವರಿ ನಂತರ ನವದೆಹಲಿಯಲ್ಲಿ ಅಮೆರಿಕ ರಾಯಭಾರಿಯಾಗಿ ಸದ್ಯ ಕೆಲಸ ನಿರ್ವಹಿಸುತ್ತಿರುವ ಕೆನ್ನೆತ್ ಜಸ್ಟರ್ ಅವರ ಉತ್ತರಾಧಿಕಾರಿಯಾಗಿ ಮುಂದುವರದಿಯಲಿದ್ದಾರೆ.
ಎರಿಕ್ ಎಂ ಗಾರ್ಸೆಟ್ಟಿ 2013 ರಿಂದ ಲಾಸ್ ಏಂಜಲೀಸ್ ನಗರದ ಮೇಯರ್ ಆಗಿದ್ದು, ಸಿಟಿ ಕೌನ್ಸಿಲ್ ಸದಸ್ಯರಾಗಿ 12 ವರ್ಷಗಳ ನಂತರ, ಕೌನ್ಸಿಲ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಯುಎಸ್ ನೇವಿ ರಿಸರ್ವ್ ಕಾಂಪೊನೆಂಟ್‌ನಲ್ಲಿ ಗುಪ್ತಚರ ಅಧಿಕಾರಿಯಾಗಿ 12 ವರ್ಷಗಳಲ್ಲಿ ಗಾರ್ಸೆಟ್ಟಿ ಕಮಾಂಡರ್, ಯುಎಸ್ ಪೆಸಿಫಿಕ್ ಫ್ಲೀಟ್ ಮತ್ತು ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿಯಡಿಯಲ್ಲಿ ಸೇವೆ ಸಲ್ಲಿಸಿದರು, 2017 ರಲ್ಲಿ ಲೆಫ್ಟಿನೆಂಟ್ ಆಗಿ ನಿವೃತ್ತರಾದರು.
ಕಳೆದ ವಾರವಷ್ಟೇ ಜೆಸ್ಟರ್ ಅವರನ್ನು ವಿದೇಶಾಂಗ ಸಂಬಂಧಗಳ ಮಂಡಳಿಗೆ ನೇಮಿಸಲಾಗಿತ್ತು. ಇತರ ಹಲವು ಮಂದಿ ರಾಯಭಾರಿಗಳ ಹೆಸರನ್ನೂ ಶುಕ್ರವಾರ ಪ್ರಕಟಿಸಲಾಗಿದೆ. ಎರಿಕ್ ಎಂ ಗರ್ಸೆಟ್ಟಿಯವರು ಲಾಸ್ ಏಂಜಲೀಸ್‌ನ ಮೇಯರ್ ಆಗಿ 2013ರಿಂದ ಕಾರ್ಯ ನಿರ್ವಹಿಸುತ್ತಿದ್ದು, 12 ವರ್ಷಗಳಿಂದ ನಗರ ಮಂಡಳಿಯ ಸದಸ್ಯರಾಗಿದ್ದರು. ಈ ಪೈಕಿ ಆರು ವರ್ಷಗಳ ಕಾಲ ಮಂಡಳಿಯ ಅಧ್ಯಕ್ಷರಾಗಿದ್ದರು ಎಂದು ಶ್ವೇತಭವನದ ಪ್ರಕಟನೆ ಹೇಳಿದೆ.








