ಸಮ್ಮರ್ ಇಲ್ಲದ ವರ್ಷದ ಬಗ್ಗೆ ನಿಮಗೆ ಗೊತ್ತಾ..?

1 min read

ಸಮ್ಮರ್ ಇಲ್ಲದ ವರ್ಷದ ಬಗ್ಗೆ ನಿಮಗೆ ಗೊತ್ತಾ..?

ಈಗಾಗಲೇ ಬೇಸಿಗೆ ಶುರುವಾಗಿದೆ. ಈ ಬಾರಿ ಸಮ್ಮರ್ ಸ್ವಲ್ಪ ಜಾಸ್ತಿ ಹಾಟ್ ಹಾಟ್ ಆಗಿರುತ್ತೆ ಅಂತ ಹವಾಮಾನ ತಜ್ಞರು ತಿಳಿಸಿದ್ದಾರೆ.  ಹೌದು..! ಸಮ್ಮರ್ ಅಂದ್ರೆ ನೆನಪಾಯಿತು. ನಿಮಗೆ ಸಮ್ಮರ್ ಇಲ್ಲದ ಸಂವತ್ಸರದ ಬಗ್ಗೆ ಗೊತ್ತಾ..? ಆ ವರ್ಷ ಬೇಸಿಗೆಯಲ್ಲಿ ಹಿಮ ಸುರಿದಿತ್ತು.! ಇದು ಮಾತ್ರವಲ್ಲ ಆ ವರ್ಷ ಭಾರಿ ವೈಪರಿತ್ಯಗಳು ನಡೆದಿವೆ. ಇದಕ್ಕೆ ಕಾರಣ ತಂಬೋರಾ ಅನ್ನೋ ಅಗ್ನಿಪರ್ವತ…!

ಇದೇನಿದು ಹಿಮದ ಬಗ್ಗೆ ಮಾತನಾಡಿ ಅಗ್ನಿಪರ್ವತದ ಬಗ್ಗೆ ಹೇಳ್ತಿದ್ದೀನಿ ಅಂದುಕೊಂಡ್ರಾ..? ಇಲ್ಲೆ ಇರೋದು ಅಸಲಿ ಕಹಾನಿ..!

ಅದು ಏಪ್ರಿಲ್ 5, 1816. ಅಂದು ಇಂಡೋನೇಷ್ಯಾದಲ್ಲಿ ಮೌಂಟ್ ಟ್ಯಾಂಬೋರಾ ಅಗ್ನಿ ಪರ್ವತ ಸ್ಫೋಟಿಸಿತ್ತು. ಅದರ ತೀವ್ರತೆ ಎಷ್ಟಿತ್ತಂದರೇ ಏಕಕಾಲದಲ್ಲಿ ಆರು ಕಿಲೋಮೀಟರ್ ದೂರು ಲಾವಾ ಹರಡಿತ್ತು. ಇದರಿಂದ ದೊಡ್ಡ ಪ್ರಮಾಣದ ಧೂಳು ವಾತಾವರಣವನ್ನ ಆವರಿಸಿಕೊಂಡಿತ್ತು. ಈ ಸ್ಫೋಟದಲ್ಲಿ ಜುಂಬಾವಾ ದ್ವೀಪದಲ್ಲಿ ವಾಸಿಸುತ್ತಿದ್ದ ಕನಿಷ್ಠ 10,000 ಜನರು ಸಾವನ್ನಪ್ಪಿದ್ದರು.
ಜ್ವಾಲಾಮುಖಿ ಸ್ಫೋಟದಿಂದಾದ ಉಂಟಾದ ಕಂಪನ, ಸುನಾಮಿಗೆ ಕಾರಣವಾಗಿತ್ತು. ಹಾಗೇ ರೋಗಗಳು ಕೂಡ ಶುರುವಾಗಿದ್ದವು. ಇದರಿಂದ ಸುತ್ತಮುತ್ತಲಿನ ದ್ವೀಪಗಳಲ್ಲಿ ಇನ್ನೂ 80-90 ಸಾವಿರ ಜನರು ಕೊನೆಯುಸಿರೆಳೆದಿದ್ದರು.

ಜ್ವಾಲಾಮುಖಿಗಳಿಂದ ಹೊರಬಂದ ಧೂಳು, ಕೊಳಕು ಮತ್ತು ಅನಿಲಗಳು ವಾಯುಮಂಡಲದಲ್ಲಿ ಸೇರಿದ್ದರಿಂದ ಅವು ಹಾಗೆ ಕೆಲವು ವರ್ಷಗಳ ಕಾಲ ಉಳಿದುಕೊಂಡಿದ್ದವು. ಕಳೆದ ಹತ್ತು ಸಾವಿರ ವರ್ಷಗಳಲ್ಲಿ ಇದು ಭೂಮಿಯ ಮೇಲಿನ ಅತಿದೊಡ್ಡ ಜ್ವಾಲಾಮುಖಿ ಸ್ಫೋಟ ಎಂಬುದು ಗಮನಾರ್ಹ.

ಸ್ಫೋಟದಿಂದಾಗಿ ವಾಯುಮಂಡಲದಲ್ಲಿ ಸೇರಿದ್ದ ಧೂಳು, ಕೊಳಕು ಮತ್ತು ಕಪ್ಪು ಅನಿಲಗಳು ಭೂಮಿಗೆ ತಲುಪುವ ಸೂರ್ಯನ ಕಿರಣಗಳಿಗೆ ಅಡ್ಡಿಯಾಗಿದ್ದವು. ಇದರಿಂದ ಸರಾಸರಿ ಜಾಗತಿಕ ತಾಪಮಾನವು ಮೂರು ಡಿಗ್ರಿಗೆ ಇಳಿಕೆಯಾಗಿತ್ತು. ಇದರಿಂದ ಆ ವರ್ಷ ಬೇಸಿಗೆಯೇ ಇಲ್ಲದಂತಾಗಿತ್ತು.

ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಬೇಸಿಗೆ ಇರುತ್ತಿತ್ತು. ಆದರೆ 1816 ವರ್ಷದಲ್ಲಿ ಜೂನ್ ನಿಂದ ಸೆಪ್ಟೆಂಬರ್ ವರೆಗೂ ಹಾಗೆ ಮುಂದುವರಿದು ಹಿಮ ಸುರಿದಿತ್ತು.

ಆ ವರ್ಷ ಬಿಸಿಳು ಇಲ್ಲದ ಕಾರಣ ಬಹುತೇಕ ಎಲ್ಲಾ ಬೆಳೆಗಳು ಹಾನಿಗೊಳಗಾಗಿದ್ದವು. ಉತ್ತರ ಅಮೆರಿಕಾ, ಯುರೋಪ್ ಮತ್ತು ಉತ್ತರ ಏಷ್ಯಾದ ಬೆಳೆಗಳು ನಿರಂತರ ಹಿಮಪಾತಕ್ಕೆ ತುತ್ತಾಗಿದ್ದವು. ಅನೇಕ ದೇಶಗಳು ತೀವ್ರ ಬರಗಾಲಕ್ಕೆ ತುತ್ತಾಗಿದ್ದವು.

ಇದರಿಂದ ಜನರು ಕುರಿ, ಮೇಕೆ ಮತ್ತು ಇತರ ಜಾನುವಾರುಗಳ ಮಾಂಸವನ್ನು ತಿನ್ನಬೇಕಾಗಿತ್ತು.

chinthamani
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd