ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‍ನ ಕ್ವಾರಂಟೈನ್ ಕೇಂದ್ರದ ಆವರಣದಲ್ಲಿ ಸೊಂಕಿತನ ಸಹೋದರ ಬೈಕ್ ಇಟ್ಟು ರಾತ್ರೋರಾತ್ರಿ ಪರಾರಿಯಾದ ಘಟನೆ ನಡೆದಿದೆ.
ಕಳೆದ ಮೂರು ದಿನಗಳ ಹಿಂದೆಯೇ ಸೊಂಕಿತನ ಸಹೋದರ ಪರಾರಿಯಾಗಿದ್ದರೂ ಜಿಲ್ಲಾಡಳಿತ ಆತನನ್ನು ಹುಡುಕುವ ಪ್ರಯತ್ನ ನಡೆಸಿಲ್ಲ ಎಮದು ಆರೋಪಿಸಲಾಗಿದೆ. ಸೋಂಕಿತನ ಸಹೋದರ ಮುಧೋಳ ನಗರದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿರುವ ಶಂಕೆ ವ್ಯಕ್ತವಾಗಿದ್ದು ಅತಂಕದ ವಾತಾವಕಾರಣ ಸೃಷ್ಟಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಗೋವಿಂದ ಕಾರಜೋಳ, ಜನರು ಜಬಾವ್ದಾರಿಯಿಂದ ವರ್ತಿಸಬೇಕು. ಕ್ವಾರಂಟೈನ್ ನಿಯಮ ಪಾಲಿಸುವುದು ಕ್ವಾರಂಟೈನ್‍ನಲ್ಲಿದ್ದವರ ಜವಾಬ್ದಾರಿ ಕೂಡ. ಎಲ್ಲವನ್ನೂ ಅಧಿಕಾರಿಗಳು ಪೊಲೀಸರು ಮಾಡಬೇಕೆಂದರೆ ಹೇಗೆ? ಜನರು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಮುಧೋಳದಲ್ಲಿ ಒಬ್ಬರು ಪರಾರಿಯಾಗಿದ್ದಾರೆ. ಜಮಖಂಡಿ ತಾಲ್ಲೂಕಿನ ಗೋಟೆ ಗ್ರಾಮದಲ್ಲಿ ಇಬ್ಬರು ಓಡಿ ಹೋಗಿದ್ದರು. ಇಬ್ಬರನ್ನು ವಾಪಸ್ ಕರೆತಂದು ಕ್ವಾರಂಟೈನ್ ಮಾಡಲಾಗಿದೆ ಎಂದು ಕಾರಜೋಳ ತಿಳಿಸಿದ್ದಾರೆ.