ಶಿವಮೊಗ್ಗ : ಕಳೆದ ಐದಾರು ದಿನಗಳಿಂದ ಶಿವಮೊಗ್ಗದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಯಾಗಿದೆ. ತುಂಗಾ, ಭದ್ರಾ ನದಿಗಳು ಮೈದುಂಬಿ ಹರಿಯುತ್ತಿದ್ದು, ಜಮೀನುಗಳಿಗೆ ನೀರು ನುಗ್ಗೆ ಬೆಳೆ ನಾಶವಾಗಿರುವುದು ಒಂದೆಡೆಯಾದ್ರೆ , ಹಲವೆಡೆದೆ ಮಳೆಯಿಂದಾಗಿ ಹಲವು ಮನೆಗಳಿಗೂ ಹಾನಿಯಾಗಿ ಮಹಾಮಳೆಗೆ ಮಲೆನಾಡಿಗರು ಕಂಗಾಲಾಗಿಹೋಗಿದ್ದಾರೆ.
ಇನ್ನೂ ತೀರ್ಥಹಳ್ಳಿ ಸಾಗರ ಸೇರಿದಂತೆ ಹಲವೆಡೆ ಭಾರೀ ಮಳೆಯಿಂದ ಸಾಕಷ್ಟು ಪ್ರಮಾಣದ ಹಾನಿಯಾಗಿದ್ದು, ಇತ್ತೀಚೆಗೆ ತೀರ್ಥಗಳ್ಳಿಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆಎಸ್ ಈಶ್ವರಪ್ಪ ಅವರು ಇಂದು ಸಾಗರ ತಾಲೂಕಿನಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ತಾಲೂಕಿನಲ್ಲಿ ನೆರೆ ಹಾಗೂ ಮಳೆ ಹಾನಿ ಬಗ್ಗೆ ಪರಿಶೀಲನೆ ನಡೆಸಲು ತೆರಳಲಿರುವ ಸಚಿವರಿಗೆ ಸ್ಥಳೀಯ ಶಾಸಕರು, ಹಾಗೂ ಅಧಿಕಾರಿಗಳು ಸಾಥ್ ನೀಡಲಿದ್ದಾರೆ.








