ಸಚಿವ ಸ್ಥಾನ ಪುನಃ ಸಿಗುವ ಬಗ್ಗೆ ಬಾಗಲಕೋಟೆಯಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಿಶ್ವಾಸ ಹೊರಹಾಕಿದ್ದಾರೆ.. ನಾನು ಚಾಮುಂಡಿ ದೇವಸ್ಥಾನಕ್ಕೆ ಹೋಗಿ ಬಂದೆ. ನಮ್ಮ ಮನೆ ದೇವರು ಚೌಡೇಶ್ವರಿ.. ನಾನೇನಾದರೂ ತಪ್ಪು ಮಾಡಿದರೆ ಚೌಡೇಶ್ವರಿ ನನಗೆ ಶಿಕ್ಷೆ ಕೊಡಲಿ.. ನಾ ತಪ್ಪು ಮಾಡಿಲ್ಲ ಅಂದ್ರೆ ಶಿಕ್ಷೆಯಿಂದ ಹೊರಬರಲಿ.. ಇದು ದೇವರಲ್ಲಿ ನನ್ನ ಪ್ರಾರ್ಥನೆ ಎಂದಿದ್ದಾರೆ..
ಅಲ್ಲದೇ ಇನ್ನೊಂದು ವಾರ ಹದಿನೈದು ದಿನದಲ್ಲಿ ಇದಕ್ಕೊಂದು ರೂಪ ಬರುತ್ತೆ ಅಂತ ಅನ್ಕೊಂಡಿದ್ದೇನೆ.. ಸಚಿವ ಸಂಪುಟ ಸೇರಿಸಿಕೊಳ್ಳೋದು ಬಿಡೋದು ಕೇಂದ್ರ ನಾಯಕರ ತೀರ್ಮಾನ ಅದಕ್ಕೆ ನಾನು ಬದ್ದ.. ನಾನು ಪಕ್ಷದ ಶಿಸ್ತಿನ ಸಿಪಾಯಿ ಪಾರ್ಟಿಯಲ್ಲಿ.. ನೂರಕ್ಕೆ ನೂರು ದೇವರ ಕೃಪೆಗೆ ಪಾತ್ರ ಆಗುತ್ತೇನೆ..
ದೇವರ ಮೇಲೆ ನಮ್ಮ ಮನೆ ದೇವರ ಮೇಲೆ ನನಗೆ ನಂಬಿಕೆ ಇದೆ.. ನಾನು ಯಾವುದೇ ಕಳಂಕ ಇಲ್ಲದೆ ಹೊರ ಬರುತ್ತೇನೆ.. ಸಂಪುಟ ಸೇರ್ಪಡೆ ಬಗ್ಗೆ ನಾ ಹೇಳಲ್ಲ.. ಅದು ಕೇಂದ್ರ ನಾಯಕರಿಗೆ ಬಿಟ್ಟಿದ್ದು… ಕಾಂಗ್ರೆಸ್ ನಲ್ಲಿ ಟಿಕೆಟ್ ಬಗ್ಗೆ ಬಡಿದಾಡ್ತಿದಾರಲ್ಲ.. ಸಿದ್ದರಾಮಯ್ಯನದ್ದು ಒಂದು ಗುಂಪು,ಡಿಕೆಶಿ ಒಂದು ಗುಂಪು..
ಬಿಜೆಪಿಯಲ್ಲಿ ನಾಲ್ಕು ಟಿಕೆಟ್ ಕೊಟ್ಟರು.. ಯಾರಾದರೂ ಏನಾದರೂ ಕೇಳಿದ್ರಾ? ಹಾಗೆ ನಮ್ಮ ಕೇಂದ್ರ ನಾಯಕರ ತೀರ್ಮಾನಕ್ಕೆ ನಾವು ಬದ್ದ.. ಇದು ನಮ್ಮ ಪಾರ್ಟಿ ಶಿಸ್ತು ಎಂದಿದ್ದಾರೆ,..








