ಯುರೋ ಕಪ್ 2021 – ಫೈನಲ್ ನಲ್ಲಿ ಯಾರು ಗೆಲ್ತಾರೆ.. ಮುಂಗೂಸಿ ಭವಿಷ್ಯ ಹೇಳೋದೇನು..?

1 min read
meerkats predict euro cup 2021 saakshatv

ಯುರೋ ಕಪ್ 2021 – ಫೈನಲ್ ನಲ್ಲಿ ಯಾರು ಗೆಲ್ತಾರೆ.. ಮುಂಗೂಸಿ ಭವಿಷ್ಯ ಹೇಳೋದೇನು..?

meerkats predict euro cup 2021 saakshatv2021ರ ಪ್ರತಿಷ್ಠಿತ ಯೂರೋ ಕಪ್ ಫುಟ್ ಬಾಲ್ ಟೂರ್ನಿಯ ಫೈನಲ್ ಪಂದ್ಯ ಭಾನುವಾರ ನಡೆಯಲಿದೆ. ಪ್ರತಿಷ್ಠಿತ ಪ್ರಶಸ್ತಿಗಾಗಿ ಇಟಲಿ ಮತ್ತು ಇಂಗ್ಲೆಂಡ್ ತಂಡಗಳು ಹೋರಾಟ ನಡೆಸಲಿವೆ.
ಈಗಾಗಲೇ ಯೂರೋ ಕಪ್ ನಲ್ಲಿ ಇಟಲಿ ತಂಡ ಒಂದು ಬಾರಿ ಪ್ರಶಸ್ತಿ ಗೆದ್ದುಕೊಂಡಿತ್ತು. ಅದು ಕೂಡ 1968ರಲ್ಲಿ. ಆದಾದ ನಂತರ 2000 ಮತ್ತು 2012ರಲ್ಲಿ ಫೈನಲ್ ಪ್ರವೇಶಿಸಿದ್ರೂ ರನ್ನರ್ ಅಪ್ ಗೆ ಸಮಾಧಾನಪಟ್ಟುಕೊಂಡಿತ್ತು. 53 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ಹಂಬದಲ್ಲಿದೆ.
ಇನ್ನೊಂದು ಕಡೆ ಇಂಗ್ಲೆಂಡ್ ತಂಡ ಚೊಚ್ಚಲ ಯೂರೋ ಕಪ್ ಗೆಲ್ಲುವ ಕನಸಿನಲ್ಲಿದೆ. ಇಲ್ಲಿಯವರೆಗೆ ಯೂರೋ ಕಪ್ ಟೂರ್ನಿಯಲ್ಲಿ 9 ಬಾರಿ ಆಡುವ ಅರ್ಹತೆ ಪಡೆದುಕೊಂಡಿರುವ ಇಂಗ್ಲೆಂಡ್ 1996ರಲ್ಲಿ ಸೆಮಿಫೈನಲ್ ಪ್ರವೇಶಿಸಿರುವುದು ದೊಡ್ಡ ಸಾಧನೆಯಾಗಿದೆ. ಹಾಗೇ 2012ರಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಇನ್ನುಳಿದಂತೆ ಇಂಗ್ಲೆಂಡ್ ಸಾಧನೆ ಅಷ್ಟಕ್ಕಷ್ಟೇ.
ಇದೀಗ 2021ರ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದು ಪ್ರಶಸ್ತಿ ಗೆಲ್ಲಲೇಬೇಕು ಎಂಬ ಹಠದಲ್ಲಿದೆ. ಇದಕ್ಕೆ ಪೂರಕವಾಗಿ ಇಂಗ್ಲೆಂಡ್ ತಂಡಕ್ಕೆ ಮುಂಗೂಸಿಯ ಭವಿಷ್ಯ ವರದಾನವಾಗುತ್ತಾ ಅನ್ನೋದನ್ನು ಕಾದು ನೋಡಬೇಕು.
ಫುಟ್ ಬಾಲ್ ನಲ್ಲಿ ಪ್ರಾಣಿಗಳ ಭವಿಷ್ಯ ಕೇಳುವುದು ಮಾಮೂಲಿ. ವಿಶ್ವಕಪ್ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಪ್ರಾಣಿಗಳನ್ನಿಟ್ಟುಕೊಂಡು ಭವಿಷ್ಯ ಕೇಳುವ ಸಾಂಪ್ರದಾಯವಿದೆ.
ಲಂಡನ್ ಮೃಗಾಲಯದಲ್ಲಿ ಇಂಗ್ಲೆಂಡ್ ಮತ್ತು ಇಟಲಿಯ ಬಾವುಟಗಳನ್ನಿಟ್ಟುಕೊಂಡು ಮುಂಗೂಸಿಯ ಬಳಿ ಭವಿಷ್ಯ ಕೇಳಲಾಗಿತ್ತು. ಆಗ ಮುಂಗೂಸಿಯು ಇಂಗ್ಲೆಂಡ್ ಬಾವುಟವನ್ನು ಆಯ್ಕೆ ಮಾಡಿಕೊಂಡಿದೆ. ಈ ಹಿಂದೆ 2010ರಲ್ಲಿ  ಆಕ್ಟೋಪಸ್ ಟೂರ್ನಿಯ ಭವಿಷ್ಯ ಹೇಳಿದ್ದು, ಎಂಟು ಪಂದ್ಯಗಳ ಭವಿಷ್ಯ ನಿಖರವಾಗಿತ್ತು.
ಮುಂಗೂಸಿಯು ದಕ್ಷಿಣ ಆಫ್ರಿಕಾದ್ದಾಗಿದೆ. ಇದನ್ನು ಮೀರ್ಕಟ್ ಎಂದು ಇಂಗ್ಲೀಷ್ ನಲ್ಲಿ ಕರೆಯಲಾಗುತ್ತಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd