ಯೂರೋ ಕಪ್ – ಇಂಗ್ಲೆಂಡ್ ಗೆ ಶರಣಾದ ಜರ್ಮನಿ.. ಸ್ವೀಡನ್ ವಿರುದ್ಧ ಉಕ್ರೇನ್ ಗೆ ರೋಚಕ ಜಯ
ಯೂರೋ ಕಪ್ ಫುಟ್ ಬಾಲ್ ಟೂರ್ನಿಯಲ್ಲಿ ಇಂಗ್ಲೆಂಡ್ ಮತ್ತು ಉಕ್ರೇನ್ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.
ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 2-0 ಗೋಲುಳಿಂದ ಬಲಿಷ್ಠ ಜರ್ಮನಿ ತಂಡವನ್ನು ಸೋಲಿಸಿದೆ.
ಹಾಗೇ ನೋಡಿದ್ರೆ, ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಸಮಬಲದ ಹೋರಾಟವನ್ನು ನೀಡಿದ್ದವು. ಇಂಗ್ಲೆಂಡ್ ಮತ್ತು ಜರ್ಮನಿ ಆಟಗಾರರು ಗೋಲು ದಾಖಲಿಸುವ ಪ್ರಯತ್ನ ನಡೆಸಿದ್ರೂ ಸಾಧ್ಯವಾಗಲಿಲ್ಲ.
ಆದ್ರೆ ದ್ವಿತೀಯಾರ್ಧದ ಕೊನೆಯ ಹಂತದಲ್ಲಿ ಇಂಗ್ಲೆಂಡ್ ತಂಡ ಜರ್ಮನಿಗೆ ಆಘಾತದ ಮೇಲೆ ಆಘಾತ ನೀಡಿತ್ತು. ಪಂದ್ಯದ 75ನೇ ನಿಮಿಷದಲ್ಲಿ ರಹೀಮ್ ಸ್ಟಿರ್ಲಿಂಗ್ ಹಾಗೂ 86ನೇ ನಿಮಿಷದಲ್ಲಿ ಹ್ಯಾರಿ ಕಾನೆ ಅವರು ಎರಡನೇ ಗೋಲು ದಾಖಲಿಸಿ ತಂಡದ ಗೆಲುವಿನ ರೂವಾರಿಯಾದ್ರು.
ಹಾಗೇ ಇನ್ನೊಂದು ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಉಕ್ರೇನ್ 2-1 ಗೋಲುಗಳಿಂದ ಸ್ವೀಡನ್ ತಂಡವನ್ನು ಮಣಿಸಿತು.
ಪಂದ್ಯದ ನಿಗದಿತ ಅವಧಿಯಲ್ಲಿ ಉಕ್ರೇನ್ ಮತ್ತು ಸ್ವೀಡನ್ ತಂಡಗಳು 1-1 ಗೋಲುಗಳಿಂದ ಸಮಬಲದ ಸಾಧಿಸಿದ್ದವು. ಪಂದ್ಯದ 27ನೇ ನಿಮಿಷದಲ್ಲಿ ಉಕ್ರೇನ್ ನ ಅಲೆಕ್ಸಾಂಡರ್ ಗೋಲು ದಾಖಲಿಸಿ ಮುನ್ನಡೆ ಒದಗಿಸಿದ್ರು. ಇಕ್ಕುತ್ತರವಾಗಿ ಸ್ವೀಡನ್ ತಂಡ 43ನೇ ನಿಮಿಷದಲ್ಲಿ ಎಮಿಲಿ ಫೋರ್ಸ್ ಬರ್ಗ್ ಗೋಲು ದಾಖಲಿಸಿ ಅಂತರವನ್ನು ಸಮಗೊಳಿಸಿದ್ರು.
ನಂತರ ಹೆಚ್ಚುವರಿ ಅವಧಿಯ ಕೊನೆಯ ಕ್ಷಣದಲ್ಲಿ ಆರ್ಟಿಮ್ ಡೆವ್ಬೋಕ್ ಮಿಂಚಿನ ಗೋಲು ದಾಖಲಿಸಿ ಸ್ವೀಡನ್ ಗೆ ಆಘಾತ ನೀಡಿದ್ರು.
ಇನ್ನು ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್ ಮತ್ತು ಸ್ವೀಜರ್ ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಹಾಗೇ ಎರಡನೇ ಕ್ವಾರ್ಟರ್ ಫೈನಲ್ ನಲ್ಲಿ ಚೆಕ್ ಗಣರಾಜ್ಯ ಮತ್ತು ಡೆನ್ಮಾರ್ಕ್ ತಂಡಗಳು ಫೈಟ್ ನಡೆಸಲಿವೆ. ಮೂರನೇ ಕ್ವಾರ್ಟರ್ ಫೈನಲ್ ನಲ್ಲಿ ಬೆಲ್ಜಿಯಂ ಮತ್ತು ಇಟಲಿ ತಂಡಗಳು ಹಣಾಹಣಿ ನಡೆಸಿದ್ರೆ, ನಾಲ್ಕನೇ ಕ್ವಾರ್ಟರ್ ಫೈನಲ್ ನಲ್ಲಿ ಉಕ್ರೇನ್ ಮತ್ತು ಇಂಗ್ಲೆಂಡ್ ತಂಡಗಳು ಕಾದಾಟ ನಡೆಸಲಿವೆ.