ಯೂರೋ ಕಪ್ – ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿರುವ ಇಂಗ್ಲೆಂಡ್ ಗೆ ಇಟಲಿ ಸವಾಲ್..!

1 min read
euro cup england denmark saakshatv

ಯೂರೋ ಕಪ್ – ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿರುವ ಇಂಗ್ಲೆಂಡ್ ಗೆ ಇಟಲಿ ಸವಾಲ್..!

euro cup 2021 saakshatv2021ರ ಯೂರೋ ಕಪ್ ಫುಟ್ ಬಾಲ್ ಟೂರ್ನಿಯಲ್ಲಿ ಇಂಗ್ಲೆಂಡ್ ಮತ್ತು ಇಟಲಿ ತಂಡಗಳು ಫೈನಲ್ ಪ್ರವೇಶಿಸಿವೆ.

ಜುಲೈ 12ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಯೂರೋಪ್ ನ ಬಲಿಷ್ಠ ತಂಡ ಯಾವುದು ಎಂಬುದು ಗೊತ್ತಾಗಲಿದೆ.

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 2-1 ಗೋಲುಗಳಿಂದ ಡೆನ್ಮಾರ್ಕ್ ತಂಡವನ್ನು ಪರಾಭವಗೊಳಿಸಿತ್ತು.

ಪಂದ್ಯದ ಮೊದಲಾರ್ಧದಲ್ಲೇ ಇಂಗ್ಲೆಂಡ್ ಮತ್ತು ಡೆನ್ಮಾರ್ಕ್ ತಂಡಗಳು 1-1ರಿಂದ ಸಮಬಲ ಸಾಧಿಸಿದ್ದವು. ಪಂದ್ಯದ 30ನೇ ನಿಮಿಷದಲ್ಲಿ ಡೆನ್ಮಾರ್ಕ್ ತಂಡದ ಮಿಕೆಲ್ ಡ್ಯಾಮ್ಸ್ ಗಾರ್ಡ್ ಅವರು ಗೋಲು ದಾಖಲಿಸಿ ತಂಡಕ್ಕೆ ಆರಂಭದ ಮುನ್ನಡೆ ಒದಗಿಸಿದ್ರು.

ಈ ಆಘಾತದಿಂದ ಹೊರಬಂದ ಇಂಗ್ಲೆಂಡ್ ತಂಡದ ಪರ ಸಿಮೊನ್ ಅವರು 39ನೇ ನಿಮಿಷದಲ್ಲಿ ಡೆನ್ಮಾರ್ಕ್ ತಂಡದ ರಕ್ಷಣಾ ಕೋಟೆಯನ್ನು ಮುರಿದು ಗೋಲು ದಾಖಲಿಸಿದ್ರು. ಅಲ್ಲದೆ ಅಂತರವನ್ನು ಸಮಗೊಳಿಸಿದ್ರು.

ಬಳಿಕ ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ಗೋಲು ದಾಖಲಿಸಲು ಸಾಕಷ್ಟು ಶ್ರಮಪಟ್ಟಿದ್ದವು. ಆದ್ರೆ ನಿಗದಿತ 90 ನಿಮಿಷಗಳ ಆಟ 1-1ರಿಂದ ಕೊನೆಗೊಂಡಿತ್ತು.

euro cup england denmark saakshatvನಂತರ ಹೆಚ್ಚುವರಿ ಅವಧಿಯ ಆಟದಲ್ಲಿ ಪಂದ್ಯದ 104ನೇ ನಿಮಿಷದಲ್ಲಿ ಇಂಗ್ಲೆಂಡ್ ತಂಡದ ಹ್ಯಾರಿ ಕೇನ್ ಅವರು ಗೋಲು ದಾಖಲಿಸಿ ತಂಡದ ಗೆಲುವಿನ ರೂವಾರಿಯಾದ್ರು.

ಈ ಗೆಲುವಿನ ಮೂಲಕ ಇಂಗ್ಲೆಂಡ್ ತಂಡ ಇದೇ ಮೊದಲ ಬಾರಿ ಯೂರೋ ಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ.

1996ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು ಇಂಗ್ಲೆಂಡ್ ನ ಶ್ರೇಷ್ಠ ಸಾಧನೆಯಾಗಿತ್ತು. ಇನ್ನುಳಿದಂತೆ 2004, 2012ರಲ್ಲಿ ಕ್ವಾರ್ಟರ್ ಫೈನಲ್ ತಲುಪಿತ್ತು.

ಅಂದ ಹಾಗೇ ಇಂಗ್ಲೆಂಡ್ ತಂಡ 16 ಯೂರೋ ಕಪ್ ಟೂರ್ನಿಗಳಲ್ಲಿ ಆರು ಬಾರಿ ಅರ್ಹತೆಯನ್ನು ಪಡೆದುಕೊಂಡಿರಲಿಲ್ಲ.

ಇದೀಗ ಚೊಚ್ಚಲ ಪ್ರಶಸ್ತಿಗಾಗಿ ಬಲಿಷ್ಠ ಇಟಲಿ ತಂಡದ ವಿರುದ್ಧ ಇಂಗ್ಲೆಂಡ್ ಹೋರಾಟ ನಡೆಸಲಿದೆ.

ಈಗಾಗಲೇ ಇಟಲಿ ತಂಡ 1968ರಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಆನಂತರ 2000 ಮತ್ತು 2012ರಲ್ಲಿ ರನ್ನರ್ ಅಪ್ ಗೆ ಸಮಾಧಾನಪಟ್ಟುಕೊಂಡಿತ್ತು. ಇಟಲಿ ತಂಡ ಕೂಡ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd