ಯುರೋ ಕಪ್ ಗೆದ್ದ ಇಟಲಿ.. ಇಂಗ್ಲೆಂಡ್ ಕನಸು ಭಗ್ನ

1 min read
euro cup 2021 Italy champion saakshatv

ಯುರೋ ಕಪ್ ಗೆದ್ದ ಇಟಲಿ.. ಇಂಗ್ಲೆಂಡ್ ಕನಸು ಭಗ್ನ

euro cup england -italy final saakshatv2021ರ ಯುರೋ ಕಪ್ ಪ್ರಶಸ್ತಿಯನ್ನು ಇಟಲಿ ಗೆದ್ದುಕೊಂಡಿದೆ. 1968ರ ಬಳಿಕ ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡಿರುವ ಇಟಲಿ ತಂಡ ಹೊಸ ಇತಿಹಾಸ ಬರೆದಿದೆ.
ಸೂಪರ್ ಸಂಡೇ ಸೂಪರ್ ಮ್ಯಾಚ್ ನಲ್ಲಿ ಇಟಲಿ ಮತ್ತು ಇಂಗ್ಲೆಂಡ್ ತಂಡಗಳು ಸಮಬಲದ ಹೋರಾಟವನ್ನೇ ನಡೆಸಿದ್ದವು. ಅಂತಿಮವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ ಇಟಲಿ ತಂಡ 3-2ರಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು. ಈ ಮೂಲಕ ಇಂಗ್ಲೆಂಡ್ ತಂಡದ ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿತ್ತು.
ಹಾಗೇ ನೋಡಿದ್ರೆ, ಪಂದ್ಯದ ಎರಡನೇ ನಿಮಿಷದಲ್ಲಿ ಇಂಗ್ಲೆಂಡ್ ತಂಡ ಇಟಲಿ ತಂಡಕ್ಕೆ ಆಘಾತ ನೀಡಿತ್ತು. ಇಂಗ್ಲೆಂಡ್ ನ ಲ್ಯೂಕ್ ಶಾಹ್ ಅವರು ಮೊದಲ ಗೋಲು ದಾಖಲಿಸಿ ಇಂಗ್ಲೆಂಡ್ ಗೆ ಮುನ್ನಡೆಯನ್ನು ತಂದುಕೊಟ್ಟಿದ್ದರು. ಆದ್ರೆ ಪಂದ್ಯದ 67ನೇ ನಿಮಿಷದಲ್ಲಿ ಇಟಲಿ ತಂಡ ಅಂತರವನ್ನು ಸಮಗೊಳಿಸಲು ಯಶಸ್ವಿಯಾಯ್ತು. ಇಟಲಯ ಲಿಯೊನಾರ್ಡ್ ಬೊನ್ಸಿಕ್ ಅವರು ಗೋಲು ದಾಖಲಸಿದ್ರು. ನಂತರ ನಿಗದಿತ 90 ನಿಮಿಷಗಳ ಆಟದಲ್ಲಿ ಎರಡು ತಂಡಗಳು 1-1ರಿಂದ ಸಮಬಲ ಸಾಧಿಸಿದ್ದವು. ಹಾಗೇ ಹೆಚ್ಚುವರಿ ಅವಧಿಯ ಆಟದಲ್ಲೂ euro cup 2021 england italy fans saakshatvಸಮಬಲದ ಹೋರಾಟ ಕಂಡು ಬಂತು. ಅಂತಿಮವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ ಪಂದ್ಯದ ಫಲಿತಾಂಶ ನಿರ್ಧರಿಸಲಾಯ್ತು. ಇದರಲ್ಲಿ ಇಟಲಿ 3-2ರಿಂದ ಗೆದ್ದುಕೊಂಡು ಎರಡನೇ ಬಾರಿ ಯೂರೋ ಕಪ್ ಗೆದ್ದ ಸಾಧನೆ ಮಾಡಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd