ಯೂರೋ ಕಪ್ – ಪ್ರಿ ಕ್ವಾರ್ಟರ್ ಫೈನಲ್ ಹೋರಾಟ ಆರಂಭ.. ಡೆನ್ಮಾರ್ಕ್ ಗೆ ವೇಲ್ಸ್ ಸವಾಲು..!
ಯೂರೋ ಕಪ್ ಫುಟ್ ಬಾಲ್ ಟೂರ್ನಿಯ ಲೀಗ್ ಪಂದ್ಯಗಳು ಮುಗಿದಿವೆ. ಇನ್ನು ಏನಿದ್ರೂ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದ ರೋಚಕ ಕಾದಾಟವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಜೂನ್ 26ರಂದು ನಡೆಯಲಿರುವ ಮೊದಲ ಪ್ರಿ ವಾರ್ಟರ್ ಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್ ಮತ್ತು ವೇಲ್ಸ್ ತಂಡಗಳು ಪೈಪೋಟಿ ನಡೆಸಲಿವೆ.
ಜೂನ್ 27ರಂದು ನಡೆಯಲಿರುವ ಎರಡನೇ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಬಲಿಷ್ಠ ಇಟೆಲಿ ತಂಡಕ್ಕೆ ಆಸ್ಟ್ರೀಯಾ ತಂಡ ಸವಾಲು ಒಡ್ಡಲಿದೆ ಹಾಗೇ ಜೂನ್ 27ರಂದು ನಡೆಯಲಿರುವ ಇನ್ನೊಂದು ಪಂದ್ಯದಲ್ಲಿ ನೆದರ್ಲೆಂಡ್ ಮತ್ತು ಚೆಕ್ ಗಣರಾಜ್ಯ ತಂಡಗಳು ಮುಖಾಮುಖಿಯಾಗಲಿವೆ.
ಹಾಗೇ ಜೂನ್ 28ರಂದು ನಡೆಯಲಿರುವ ರೋಚಕ ಪಂದ್ಯವನ್ನು ಭಾರೀ ಕುತೂಹಲದಿಂದ ಫುಟ್ ಬಾಲ್ ಜಗತ್ತು ಕಾಯುತ್ತಿದೆ. ವಿಶ್ವದ ನಂಬರ್ ವನ್ ತಂಡ ಬೆಲ್ಜಿಯಂ ಮತ್ತು ಕ್ರಿಸ್ಟಿಯಾನೊ ರೊನಾಲಡ್ಡೊ ಸಾರಥ್ಯದ ಪೋರ್ಚ್‍ಗಲ್ ತಂಡಗಳ ನಡುವೆ ಹಣಾಹಣಿ ನಡೆಯಲಿದೆ.
ಜೂನ್ 28ರರಂದು ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಸ್ಪೇನ್ ಮತ್ತು ಕ್ರೊವೇಶಿಯಾ ತಂಡಗಳು ಫೈಟ್ ನಡೆಸಲಿವೆ.
ಜೂನ್ 29ರಂದು ಫ್ರಾನ್ಸ್ ಮತ್ತು ಸ್ವಿಜರ್ಲೆಂಡ್ ಹಾಗೂ ಇಂಗ್ಲೆಂಡ್ ಮತ್ತು ಜರ್ಮನಿ ತಂಡಗಳು ಮುಖಾಮುಖಿಯಾಗಲಿವೆ. ಜೂನ್ 30ರಂದು ಕೊನೆಯ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಸ್ವೀಡನ್ ಮತ್ತು ಉಕ್ರೇನ್ ತಂಡಗಳು ಹೋರಾಟ ನಡೆಸಲಿವೆ. ಜುಲೈ2ರಿಂದ ಕ್ವಾರ್ಟರ್ ಫೈನಲ್ ಪಂದ್ಯಗಳು ಆರಂಭವಾಗಲಿವೆ.