ಯುರೋಪ್‌ ನಲ್ಲಿ ಭಾರೀ ಮಳೆ : ಜರ್ಮನಿಯಲ್ಲಿ ಪ್ರವಾಹ – 42 ಮಂದಿ ಸಾವು , 70 ಮಂದಿ ನಾಪತ್ತೆ..!

1 min read

ಯುರೋಪ್‌ ನಲ್ಲಿ ಭಾರೀ ಮಳೆ : ಜರ್ಮನಿಯಲ್ಲಿ ಪ್ರವಾಹ – 42 ಮಂದಿ ಸಾವು , 70 ಮಂದಿ ನಾಪತ್ತೆ..!

ಯುರೋಪ್‌ ನಲ್ಲಿ ಬಾರೀ ಮಳೆಯಾಗ್ತಾಯಿದ್ದು, ಹಲವೆಡೆ ಪ್ರವಾಹದ ವಾತಾವರಣ ನಿರ್ಮಾಣವಾಗಿದೆ.. ಅದ್ರಲ್ಲೂ  ಜರ್ಮನಿಯಲ್ಲಿ ಪರಿಸ್ಥಿತಿ  ಕೆಟ್ಟದಾಗಿದ್ದು, ಪ್ರವಾಹದಲ್ಲಿ ಇಲ್ಲಿಯರೆಗೂ ಸುಮಾರು 42 ಅಥವ ಅದಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗ್ತಿದೆ. ಅಲ್ಲದೇ ಹಲವರು ನಾಪತ್ತೆಯಾಗಿದ್ದಾರೆ.

ನೆರೆಗೆ ಹಲವು ಮನೆಗಳು ಕುಸಿದಿವೆ. ಅಸಾಧಾರಣ ಮಳೆಗೆ ನೆರೆಯ ಲಕ್ಸೆಂಬರ್ಗ್, ಹಾಲೆಂಡ್ ಹಾಗೂ ಬೆಲ್ಜಿಯಂನಲ್ಲೂ ಪ್ರವಾಹದ ಸ್ಥಿತಿ ಎದುರಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ರೈನ್‌ಲ್ಯಾಂಡ್ ಪ್ಯಾಲಟಿನೇಟ್ ಮತ್ತು ನಾರ್ತ್ ರೈನ್-ವೆಸ್ಟ್‌ಫೇಲಿಯಾ  ಸ್ಟೇಟ್‌ನ ಪ್ರದೇಶಗಳು ಅತಿ ಹೆಚ್ಚು ಹಾನಿಗೊಳಗಾಗಿದ್ದು, ನದಿಗಳು ಉಕ್ಕಿ ಹರಿದಿವೆ.

ಅಹ್ರ್ವೀಲರ್ ಪಟ್ಟಣದ ಸುತ್ತಮುತ್ತಲಿನ ಪ್ರದೇಶದಿಂದ 18 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಎನ್‌ಆರ್‌ಡಬ್ಲ್ಯು ಉತ್ತರಕ್ಕೆ ಆಯ್ಸ್‌ಕರ್ಚ್ ಪ್ರಾಂತ್ಯದಲ್ಲಿ 15 ಮಂದಿ ಸಾವಿಗೀಡಾಗಿದ್ದಾರೆ.

ಮೂಲಗಳ ಪ್ರಕಾರ ಇನ್ನೂ 70 ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಮತ್ತಷ್ಟು ಮಳೆ ಸುರಿದರೆ ಪ್ರವಾಹದ ತೀವ್ರತೆ ಹೆಚ್ಚಲಿದೆ ಎಂದು ಎಚ್ಚರಿಸಲಾಗಿದೆ. ಈ ಮಧ್ಯೆ ರಕ್ಷಣಾ ಕಾರ್ಯಾಚರಣೆ ಸಹ ಭರದಿಂದ ನಡೆಯುತ್ತಿದ್ದು, ನಾಪತ್ತೆಯಾಗಿರುವವರ ಶೋಧ ಕಾರ್ಯವೂ ಸಾಗಿದೆ.  ಇನ್ನೂ ಜನರಿಗೆ ಮನೆಯಲ್ಲೇ ಉಳಿದುಕೊಳ್ಳುವಂತೆ ಸೂಚಿಸಲಾಗಿದ್ದು, ಮನೆಯ ಮಹಡಿಯಲ್ಲಿ ಇರುವಂತೆ ತಿಳಿಸಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd