ಚಿಕ್ಕೋಡಿ: ಡಿಕೆಶಿ ಅಪ್ಪ ಬಂದರೂ ನನ್ನ ಏನೂ ಮಾಡೋಕೆ ಆಗಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಗುಡುಗಿದ್ದಾರೆ.
ಶಾಸಕ ರಾಜು ಕಾಗೆ ವಿರುದ್ಧ ಮಾಜಿ ಶಾಸಕ ಶ್ರೀಮಂತ ಪಾಟೀಲ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಿಡಿ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ (D.K Shivakumar) ನನಗೆ ಕೊಡಿಸುವ ಕುತಂತ್ರ ಮಾಡಿದ್ದ. ಅದು ಸಾಧ್ಯವಾಗಲಿಲ್ಲ. ಈಗ ಬ್ಯಾಂಕ್ಗೆ ವಂಚನೆ ಹೆಸರಿನಲ್ಲಿ 420 ಕೇಸ್ ದಾಖಲಿಸಿದ್ದಾನೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ಕೇಸ್ ದಾಖಲಿಸಿ ಟಿವಿಯಲ್ಲಿ ನನ್ನ ಹೆಸರು ನೋಡಿ ಸಮಾಧಾನ ಮಾಡಿಕೊಳ್ಳುತ್ತಿದ್ದಾನೆ. ನಾನು ಗಟ್ಟಿಯಾಗೇ ಇದ್ದೇನೆ. ನನ್ನ ಹಿಮ್ಮೆಟ್ಟಿಸಲು ಡಿ.ಕೆ ಶಿವಕುಮಾರ್ ಅಪ್ಪ ಬಂದರೂ ಆಗಲ್ಲ ಎಂದು ಗುಡುಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಫ್ರೀ ಹ್ಯಾಂಡ್ ಕೆಲಸ ಮಾಡಲು ಬಿಡುತ್ತಿಲ್ಲ. ಶಿವಕುಮಾರ್ ಹೈಕಮಾಂಡ್ ಮೇಲೆ ಒತ್ತಡ ತಂದು ಸಿಎಂ ಶಕ್ತಿ ಕುಂದಿಸುವ ಕೆಲಸ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.