ಮುಂದಿನ ಚುನಾವಣೆಯಲ್ಲಿ ನನ್ನ ಒಬ್ಬ ಶಾಸಕ ಸೋತರೂ ರಾಜಕೀಯ ಸನ್ಯಾಸ – ಏಕನಾಥ್ ಶಿಂಧೆ…
ಉದ್ಧವ್ ಠಾಕ್ರೆ ನಾಯಕತ್ವನ್ನ ತೊರೆದು ತಮ್ಮನ್ನ ಬೆಂಬಲಿಸಿದ 50 ಶಾಸಕರ ಪೈಕಿ ಒಬ್ಬ ಶಾಸಕರು ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಶಾಶ್ವತವಾಗಿ ರಾಜಕೀಯ ತೊರೆಯುತ್ತೇನೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಶುಕ್ರವಾರ ಹೇಳಿದ್ದಾರೆ.
“ಈ ಶಾಸಕರನ್ನು ನೋಡಿಕೊಳ್ಳುವುದು ಈಗ ನನ್ನ ಜವಾಬ್ದಾರಿಯಾಗಿದೆ. ಅವರ ಕ್ಷೇತ್ರಗಳ ಸಮಸ್ಯೆಗಳನ್ನು ಪರಿಹರಿಸಲು ನಾನು ಅವರಿಗೆ ಎಲ್ಲವನ್ನೂ ಮತ್ತು ಸಮಯವನ್ನು ನೀಡುತ್ತೇನೆ. ಶಿವಸೇನೆಯ ಹಿಂದಿನ ಇತಿಹಾಸದ ಪ್ರಕಾರ ಉದ್ಧವ್ ಠಾಕ್ರೆ ವಿರುದ್ಧ ಹೋದ ಎಲ್ಲಾ 50 ಶಾಸಕರು ಚುನಾವಣೆಯಲ್ಲಿ ಸೋಲುತ್ತಾರೆ ಎಂದು ಜನರು ಹೇಳುತ್ತಾರೆ. ಆದರೆ, ಈ ಜನರಿಗೆ ನಾನು ಹೇಳ್ತೆನೆ, ಇವರಲ್ಲಿ ಒಬ್ಬ ಶಾಸಕರು ಚುನಾವಣೆಯಲ್ಲಿ ಸೋತರೂ, ನಾನು ರಾಜಕೀಯ ಸನ್ಯಾಸವನ್ನು ಶಾಶ್ವತವಾಗಿ ತೆಗೆದುಕೊಳ್ಳುತ್ತೇನೆ ಎಂದು ಶಿಂಧೆ ಹೇಳಿದರು.
ಮಹಾ ವಿಕಾಸ್ ಅಘಾಡಿ ಸಂದರ್ಭದಲ್ಲಿ ಶಿವಸೇನಾ ಶಾಸಕರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳಲಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ. ಈಗ ನಾನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದೇನೆ, ನಮ್ಮ ಜನರಿಗೆ ಯಾರೂ ತೊಂದರೆ ಕೊಡುವುದಿಲ್ಲ. ನಾನು ಈ ಹಿಂದೆ ಒಂದಲ್ಲ ಐದು ಬಾರಿ ನಮ್ಮ ನಾಯಕತ್ವಕ್ಕೆ ದೂರು ನೀಡಿದ್ದರೂ ಅವರು ನಮ್ಮ ಮಾತನ್ನು ಕೇಳಲಿಲ್ಲ. ಆದ್ದರಿಂದ, ರಾಜ್ಯದ ಹಿತಾಸಕ್ತಿಗಾಗಿ ಈ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಬಾಳಾಸಾಹೇಬ್ ಠಾಕ್ರೆ ಅವರ ಹಿಂದುತ್ವದ ಅಜೆಂಡಾವನ್ನು ಮುನ್ನಡೆಸಲು ನಮಗೆ ಯಾವುದೇ ಆಯ್ಕೆಗಳಿಲ್ಲ ಎಂದು ಶಿಂಧೆ ಹೇಳಿದರು.
Even if one of my MLAs lose in coming elections, I will embrace political Sanyas: Eknath Shinde