ADVERTISEMENT
Tuesday, October 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಜನಪ್ರಿಯ ನಾಯಕ ಆಗಿಲ್ಲದಿದ್ದರೂ ಒಲಿದು ಬಂದಿತ್ತು ಪ್ರಧಾನಿ ಪಟ್ಟ!!

ಪ್ರಧಾನಿ ಹುದ್ದೆ ಗಿಟ್ಟಿಸಿದ್ದೂ ರೋಚಕ

Author2 by Author2
December 27, 2024
in National, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಮನಮೋಹನ್‌ ಸಿಂಗ್‌ (Manmohan Singh) ಜನಪ್ರಿಯ ನಾಯಕನಾಗಿಲ್ಲದಿದ್ದರೂ ಅವರಿಗೆ ಪ್ರಧಾನಿ ಪಟ್ಟ ಒಲಿದು ಬಂದಿತ್ತು.
2004ರಲ್ಲಿ ಪ್ರಧಾನಿ ಪಟ್ಟ ಸಿಕ್ಕಿದ್ದೇ ರೋಚಕ ಎನ್ನುವಂತಾಗಿದೆ. ಅಟಲ್‌ ಬಿಹಾರಿ (Atal Bihari Vajpayee) ಸರ್ಕಾರ 1999 ರಿಂದ ಕೇಂದ್ರದಲ್ಲಿ ಆಡಳಿತ ನಡೆಸಿತ್ತು. ಮೂಲಸೌಕರ್ಯ ಸೇರಿದಂತೆ ಹಲವಾರು ಯೋಜನೆಗಳಿಂದಾಗಿ ಮತ್ತೆ ಆಯ್ಕೆ ಆಗುತ್ತೇವೆ ಎಂಬ ವಿಶ್ವಾಸದಿಂದ 6 ತಿಂಗಳು ಮೊದಲೇ ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗಿತ್ತು. ʼಭಾರತ ಪ್ರಕಾಶಿಸುತ್ತದೆʼ ಅಡಿ ಎನ್‌ಡಿಎ ನಾಯಕರು ಭರ್ಜರಿ ಪ್ರಚಾರ ನಡೆಸಿದರು. ಆದರೆ 2004ರ ಚುನಾವಣೆಯಲ್ಲಿ ಸೋನಿಯಾ ಗಾಂಧಿ (Sonia Gandhi) ನೇತೃತ್ವದ ಯುಪಿಎ (UPA) ಭರ್ಜರಿ ಗೆಲುವು ಸಾಧಿಸಿತ್ತು.

ಅಧಿಕಾರಕ್ಕೆ ಯುಪಿಎ ಏರುವುದು ನಿಶ್ಚಿತವಾಗುತ್ತಿದ್ದಂತೆ ಸೋನಿಯಾ ಗಾಂಧಿ ಪ್ರಧಾನಿ ಆಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ವಿದೇಶಿ ಮಹಿಳೆ ಭಾರತದ ಪ್ರಧಾನಿ ಹುದ್ದೆ ಅಲಂಕರಿಸುವುದು ಸರಿಯಲ್ಲ ಎಂದು ವಿಪಕ್ಷಗಳು ಟೀಕಿಸಲು ಆರಂಭಿಸುತ್ತಿದ್ದಂತೆ ಸೋನಿಯಾ ಗಾಂಧಿ ತಮಗೆ ಸಿಕ್ಕಿದ್ದ ಅವಕಾಶವನ್ನು ಮನಮೋಹನ್ ಸಿಂಗ್ ಅವರಿಗೆ ನೀಡಿದರು.

Related posts

jio-games-cricket-26-premium-cricket-game-pro-pass

ಜಿಯೋ ಗೇಮ್ಸ್‌ನಲ್ಲಿ ‘ಕ್ರಿಕೆಟ್ 26’; ಪ್ರೀಮಿಯಂ ಕ್ರಿಕೆಟ್ 48 ರೂ.ನಿಂದ ಆರಂಭ

October 5, 2026
india-singles-loneliness-survey-dating-apps-real-life-connections

ಆನ್‌ಲೈನ್‌ನಲ್ಲಿ ನೂರಾರು ಫ್ರೆಂಡ್ಸ್, ರಿಯಲ್ ಲೈಫ್‌ನಲ್ಲಿ ಯಾರೂ ಇಲ್ಲ! ಭಾರತದ ‘ಸಿಂಗಲ್ಸ್’ಗೆ ಕಾಡುತ್ತಿದೆ ಒಂಟಿತನ; ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿ

October 5, 2026

ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯಿಂದ ಹಿಂದೆ ಸರಿಯುತ್ತಿದ್ದಂತೆ ಸಾಕಷ್ಟು ಹೆಸರುಗಳು ಈ ರೇಸ್ ನಲ್ಲಿ ಕೇಳಿ ಬಂದಿದ್ದವು. ಮಾಧ್ಯಮಗಳಲ್ಲಿ ಕೆಲವರ ಹೆಸರುಗಳು ಹರಿದಾಡಲು ಆರಂಭವಾದವು. ಆದರೆ, ಯಾರೂ ನಿರೀಕ್ಷೆ ಮಾಡದ ಹೆಸರನ್ನು ಸೋನಿಯಾ ಗಾಂಧಿ ಫೈನಲ್‌ ಮಾಡಿದರು. ಆ ಹೆಸರೇ ಮನಮೋಹನ್‌ ಸಿಂಗ್‌. ಅಂದು ಸೋನಿಯಾ ಮನಮೋಹನ್ ಸಿಂಗ್ ಅವರ ಕೈಗೆ ದೇಶವನ್ನು ನೀಡಿದರು.

ಮನಮೋಹನ ಸಿಂಗ್‌ ಆರ್ಥಿಕ ತಜ್ಞ ಹೌದು. ಆದರೆ ಜನಪ್ರಿಯ ನಾಯಕನಲ್ಲ. ಮಿತ ಭಾಷಿ. ಹೀಗಿದ್ದರೂ ಪಿವಿ ನರಸಿಂಹ ರಾವ್‌ ಅವಧಿಯಲ್ಲಿ ಕೈಗೊಂಡ ಆರ್ಥಿಕ ಸುಧಾರಣೆಯನ್ನು ಗಮನಿಸಿ ಮನಮೋಹನ ಸಿಂಗ್‌ ರಿಗೆ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನು ನೀಡಿದ್ದರು.

ಚುನಾವಣೆಯಲ್ಲಿ ಕಾಂಗ್ರೆಸ್‌ (Congress) ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಏಕಾಂಗಿಯಾಗಿ ಸರ್ಕಾರ ನಡೆಸುವಷ್ಟು ಬಹುಮತ ಸಿಕ್ಕಿರಲಿಲ್ಲ. ಕಾಂಗ್ರೆಸ್‌ನಲ್ಲಿ ಯಾರೇ ಪ್ರಧಾನಿಯಾದರೂ ಮಿತ್ರ ಪಕ್ಷಗಳನ್ನು ಸಂಭಾಳಿಸುವುದು ಕಷ್ಟ ಎನ್ನುವುದು ಸೋನಿಯಾಗೆ ತಿಳಿದಿತ್ತು. ಮನಮೋಹನ್‌ ಸಿಂಗ್‌ ಪ್ರಧಾನಿಯಾದರೆ ಮಿತ್ರ ಪಕ್ಷಗಳು ವಿರೋಧ ಮಾಡುವುದಿಲ್ಲ ಎನ್ನುವುದನ್ನು ತಿಳಿದಿದ್ದ ಸೋನಿಯಾ ಗಾಂಧಿ, ಸಿಂಗ್‌ ರಿಗೆ ಪ್ರಧಾನಿ ಹುದ್ದೆ ನೀಡಿದ್ದರು ಎನ್ನಲಾಗುತ್ತಿತ್ತು.

ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದರೂ ಅವರ ಸರ್ಕಾರಕ್ಕೆ ಸಲಹೆ ನೀಡಲು ರಾಷ್ಟ್ರೀಯ ಸಲಹಾ ಮಂಡಳಿ(National Advisory Council) ರಚನೆಯಾಗಿತ್ತು. ಈ ಮಂಡಳಿಗೆ ಸೋನಿಯಾ ಗಾಂಧಿ ಮುಖ್ಯಸ್ಥರಾಗಿದ್ದರು. ಈ ಮಂಡಳಿ ರಚನೆಯಿಂದ ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದರೂ ಸೋನಿಯಾ ಗಾಂಧಿ ಹೇಳಿದಂತೆ ಕೆಲಸ ಮಾಡುತ್ತಿದ್ದಾರೆ ಎಂಬ ಟೀಕೆಗಳು ಕೇಳಿದ್ದವು.

Tags: deathManamohan singhpmpolitician
ShareTweetSendShare
Join us on:

Related Posts

jio-games-cricket-26-premium-cricket-game-pro-pass

ಜಿಯೋ ಗೇಮ್ಸ್‌ನಲ್ಲಿ ‘ಕ್ರಿಕೆಟ್ 26’; ಪ್ರೀಮಿಯಂ ಕ್ರಿಕೆಟ್ 48 ರೂ.ನಿಂದ ಆರಂಭ

by admin
October 5, 2026
0

* ಪ್ರೊ ಪಾಸ್ 48 ರೂ.ನಿಂದ ಪ್ರಾರಂಭ. ಜಿಯೋ ಬಳಕೆದಾರರಿಗೆ ಆಯ್ದ ಯೋಜನೆಗಳಲ್ಲಿ 100 ರೂ.ವರೆಗೆ ರಿಯಾಯಿತಿ * ಪ್ರೀಮಿಯಂ ಕ್ರಿಕೆಟ್ ಆಟಗಳನ್ನು ಕ್ಲೌಡ್‌ನಿಂದ ಸ್ಟ್ರೀಮ್ ಮಾಡಲಾಗುತ್ತದೆ...

india-singles-loneliness-survey-dating-apps-real-life-connections

ಆನ್‌ಲೈನ್‌ನಲ್ಲಿ ನೂರಾರು ಫ್ರೆಂಡ್ಸ್, ರಿಯಲ್ ಲೈಫ್‌ನಲ್ಲಿ ಯಾರೂ ಇಲ್ಲ! ಭಾರತದ ‘ಸಿಂಗಲ್ಸ್’ಗೆ ಕಾಡುತ್ತಿದೆ ಒಂಟಿತನ; ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿ

by admin
October 5, 2026
0

ಬೆಂಗಳೂರು: ಇಂದಿನ ಆಧುನಿಕ ಹಾಗೂ ಡಿಜಿಟಲ್ ಯುಗದಲ್ಲಿ ಯುವಜನತೆ ಸದಾ ಆನ್‌ಲೈನ್‌ನಲ್ಲಿ ಕನೆಕ್ಟ್ ಆಗಿದ್ದರೂ, ನಿಜಜೀವನದಲ್ಲಿ ಆಪ್ತ ಸಂಬಂಧಗಳ ತೀವ್ರ ಕೊರತೆಯನ್ನು ಎದುರಿಸುತ್ತಿದ್ದಾರೆ. ಹೀಗಂತ ಭಾರತದ ಯುವಜನತೆಯ...

swiggy-dineout-great-indian-ravi-festival-50-percent-discount

ʼಡಿಸ್ಕೌಂಟ್ ಫಾಲೋಸ್ ಮೈ ಬ್ರದರ್..!ʼ: ಸ್ವಿಗ್ಗಿ ಡೈನ್‌ಔಟ್‌ನಿಂದ ಹೋಟೆಲ್ ಊಟದ ಮೇಲೆ ಬರೋಬ್ಬರಿ 50% ಡಿಸ್ಕೌಂಟ್

by admin
October 5, 2026
0

ಹೊರಗಡೆ ಹೋಗಿ ರುಚಿಯಾದ ಊಟ ಮಾಡೋದು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅಂಥ ಭೋಜನ ಪ್ರಿಯರಿಗೆ ಸ್ವಿಗ್ಗಿ ಡೈನ್‌ಔಟ್ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಸ್ವಿಗ್ಗಿಯ...

ಎಷ್ಟಾದ್ರೂ ಮದ್ವೆಯಾಗ್ತೀನಿ ಏನಿವಾಗ? ಹಿಂದೂಗಳ ವಿರುದ್ಧ ನಾನು ಮಾತನಾಡೇ ಇಲ್ಲ, ನನ್ನ ಸಂಸಾರ ನನ್ನ ಇಷ್ಟ: ಮದುವೆಯ ಬಗ್ಗೆ ಟೀಕಿಸುವವರ ಬೆವರಿಳಿಸಿದ ನಟ ಪ್ರಕಾಶ್ ರಾಜ್

ಎಷ್ಟಾದ್ರೂ ಮದ್ವೆಯಾಗ್ತೀನಿ ಏನಿವಾಗ? ಹಿಂದೂಗಳ ವಿರುದ್ಧ ನಾನು ಮಾತನಾಡೇ ಇಲ್ಲ, ನನ್ನ ಸಂಸಾರ ನನ್ನ ಇಷ್ಟ: ಮದುವೆಯ ಬಗ್ಗೆ ಟೀಕಿಸುವವರ ಬೆವರಿಳಿಸಿದ ನಟ ಪ್ರಕಾಶ್ ರಾಜ್

by Shwetha
October 5, 2026
0

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರಾಜ್ ಎಂದರೆ ಸದಾ ವಿವಾದಗಳ ಕೇಂದ್ರಬಿಂದು. ತಮ್ಮ ಹರಿತವಾದ ಮಾತುಗಳ ಮೂಲಕ ಕೇಂದ್ರ ಸರ್ಕಾರ ಮತ್ತು ಬಿಜೆಪಿಯನ್ನು ಸತತವಾಗಿ ಟೀಕಿಸುವ ಪ್ರಕಾಶ್...

ಸನಾತನ ಧರ್ಮದ ಅಸ್ಮಿತೆ ಉಳಿಸಲು ಹಿಂದೂ ಯುವಕರು ಐದು ಮಕ್ಕಳನ್ನು ಪಡೆಯಲೇಬೇಕು: ಬಿಜೆಪಿ ಸಂಸದ ಗಜೇಂದ್ರ ಸಿಂಗ್ ಪಟೇಲ್

ಸನಾತನ ಧರ್ಮದ ಅಸ್ಮಿತೆ ಉಳಿಸಲು ಹಿಂದೂ ಯುವಕರು ಐದು ಮಕ್ಕಳನ್ನು ಪಡೆಯಲೇಬೇಕು: ಬಿಜೆಪಿ ಸಂಸದ ಗಜೇಂದ್ರ ಸಿಂಗ್ ಪಟೇಲ್

by Shwetha
October 5, 2026
0

ಬಾರ್ವಾನಿ: ದೇಶದ ಜನಸಂಖ್ಯಾ ಸಮತೋಲನದಲ್ಲಿ ಉಂಟಾಗುತ್ತಿರುವ ಏರುಪೇರು ಮತ್ತು ಸನಾತನ ಧರ್ಮದ ಭವಿಷ್ಯದ ಬಗ್ಗೆ ಮಧ್ಯಪ್ರದೇಶದ ಬಿಜೆಪಿ ಸಂಸದ ಗಜೇಂದ್ರ ಸಿಂಗ್ ಪಟೇಲ್ ಅವರು ಅತ್ಯಂತ ಕಳವಳಕಾರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram