ದುನಿಯಾ ದುಬಾರಿ | ಇಂದೂ ಕೂಡ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ petrol and diesel saaksha tv
ಮುಂಬೈ: ಅಕ್ಟೋಬರ್ 27ರ ಬಳಿಕ ಸತತ ಐದನೇ ದಿನವೂ ಕೂಡ ದೇಶದಲ್ಲಿ ಇಂಧನ ಬೆಲೆ ಏರಿಕೆಯಾಗಿದೆ.
ಇವತ್ತು ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 31 ರಿಂದ 39 ಪೈಸೆ ಹಾಗೂ ಡೀಸೆಲ್ ಮೇಲೆ 35 ರಿಂದ 40 ಪೈಸೆಯನ್ನು ಹೆಚ್ಚಿಸಿವೆ.
ಇದರೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 109.69 ರೂ. ಡೀಸೆಲ್ ದರ 98.42 ರೂ.ಗೆ ಏರಿಕೆಯಾಗಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 113.56 ಹಾಗೂ ಡೀಸೆಲ್ ದರ 104.50 ರೂ.ಗೆ ಏರಿಕೆಯಾಗಿದೆ.
ಮುಂಬೈನಲ್ಲಿ 115.50 ರೂ. ಡಿಸೇಲ್ ಬೆಲೆ 106.62 ರೂಪಾಯಿಆಗಿದೆ.
ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತವೆ.