ADVERTISEMENT
Thursday, June 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Mumbai Karnataka

ಮಾಜಿ ಸಿಎಂ ಜಗದೀಶ ಶೆಟ್ಟರ್ ಗೆ ಟಿಕೆಟ್ ಮಿಸ್?

ಬೆಂಬಲಿಗರ ಸಬೆಯಲ್ಲಿ ಭಾವುಕರಾಗಿ ಮಾತನಾಡಿದ ಮಾಜಿ ಸಿಎಂ

Author2 by Author2
April 15, 2023
in Mumbai Karnataka, ಮುಂಬೈ ಕರ್ನಾಟಕ
Share on FacebookShare on TwitterShare on WhatsappShare on Telegram

ಬಿಜೆಪಿಯಲ್ಲಿ ಹಿರಿಯ ನಾಯಕರ ಮುನಿಸು ಇನ್ನೂ ಮುಂದುವರೆದಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ (Hubli-Dharwad Central) ಕ್ಷೇತ್ರದ ಬಿಜೆಪಿ (BJP) ಟಿಕೆಟ್ ಘೋಷಣೆಯಾಗದ ಹಿನ್ನೆಲೆಯಲ್ಲಿ ಹಿರಿಯ ನಾಯಕ ಹಾಗೂ ಶಾಸಕ ಜಗದೀಶ್ ಶೆಟ್ಟರ್ (Jagadish Shettar) ತೀವ್ರ ಅಸಮಾಧಾನಗೊಂಡಿದ್ದಾರೆ.

ಹುಬ್ಬಳ್ಳಿಯ ಕೇಶ್ವಾಪುರದ ಮಧುರಾ ಕಾಲೋನಿಯಲ್ಲಿನ ನಿವಾಸದಲ್ಲಿ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ನಾನು 6 ಬಾರಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದೇನೆ. 7ನೇ ಬಾರಿ ಅತ್ಯಧಿಕ ಬಹುಮತದಿಂದ ಗೆಲ್ಲಿಸುವುದಾಗಿ ಜನ ಭರವಸೆ ನೀಡಿದ್ದರು. ಆದರೆ, ಪಕ್ಷ ಈ ಕ್ಷೇತ್ರ ಸೇರಿದಂತೆ 12 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿಲ್ಲ. ಟಿಕೆಟ್ ವಿಚಾರವಾಗಿ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗಿ ಬಂದಿರುವೆ. ನನಗೆ ಅಧಿಕಾರದ ದಾಹವಿಲ್ಲ, ಜನ ಸೇವೆ ಮಾಡಲು ಅವಕಾಶ ಕೇಳಿದ್ದೇನೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಬಂದು ಹೋಗಿದ್ದಾರೆ. ಕೇಂದ್ರದ ನಾಯಕರು ನನಗೆ ಟಿಕೆಟ್ ಘೋಷಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

Related posts

ಕನ್ನಡಪರ ಹೋರಾಟಗಾರರು ನಾಲಾಯಕ ಎಂದ MES ಮುಖಂಡ;ಪದೇ ಪದೇ ಬೆಳಗಾವಿಯಲ್ಲಿ ಭಾಷಾ, ಗಡಿ ವಿವಾದ ಸೃಷ್ಟಿಸುತ್ತಿರೋ MES ಹೆಡೆಮುರಿ ಕಟ್ಟೋರು ಯಾರು?

ಕನ್ನಡಪರ ಹೋರಾಟಗಾರರು ನಾಲಾಯಕ ಎಂದ MES ಮುಖಂಡ;ಪದೇ ಪದೇ ಬೆಳಗಾವಿಯಲ್ಲಿ ಭಾಷಾ, ಗಡಿ ವಿವಾದ ಸೃಷ್ಟಿಸುತ್ತಿರೋ MES ಹೆಡೆಮುರಿ ಕಟ್ಟೋರು ಯಾರು?

February 23, 2025
ಬೆಳಗಾವಿ ಗಡಿಯಲ್ಲಿ ಉದ್ವಿಗ್ನ: ಕರ್ನಾಟಕ – ಮಹಾರಾಷ್ಟ್ರ ನಡುವಿನ ಬಸ್​ ಸೇವೆ ಸ್ಥಗಿತ

ಬೆಳಗಾವಿ ಗಡಿಯಲ್ಲಿ ಉದ್ವಿಗ್ನ: ಕರ್ನಾಟಕ – ಮಹಾರಾಷ್ಟ್ರ ನಡುವಿನ ಬಸ್​ ಸೇವೆ ಸ್ಥಗಿತ

February 23, 2025

ಹೀಗಾಗಿ ಅವರು ತಮ್ಮ ನಿವಾಸದಲ್ಲಿ ಇಂದು ಬೆಂಬಲಿಗರ ಜೊತೆ ಸಭೆ ನಡೆಸಿ ಭಾವುಕ ಮಾತುಗಳನ್ನು ಆಡಿದ್ದಾರೆ. ಬಿಜೆಪಿ (BJP) ನನಗೆ ಎಲ್ಲಾ ಸ್ಥಾನಮಾನ ನೀಡಿದೆ. ಹೀಗಾಗಿ ನಾನು ಪಕ್ಷಕ್ಕೆ ಋಣಿಯಾಗಿರುವೆ. ಶಾಸಕ, ಸಚಿವ, ವಿಪಕ್ಷ ನಾಯಕ, ಸ್ಪೀಕರ್, ಸಿಎಂ ಆಗಿ ಸೇವೆ ಮಾಡಿದ್ದೇನೆ. ಇದುವರೆಗೆ 6 ಬಾರಿ ಚುನಾವಣೆಗೆ ಸ್ಪರ್ಧಿಸಿ ಬಹುಮತದಿಂದ ಗೆದ್ದಿದ್ದೇನೆ ಎಂದು ಭಾವುಕರಾಗಿ ಮಾತನಾಡಿದ್ದಾರೆ.

ಹು-ಧಾ ಸೆಂಟ್ರಲ್ ಕ್ಷೇತ್ರದ ಜನರ, ನನ್ನ ಸ್ವಾಭಿಮಾನದ ಪ್ರಶ್ನೆ ಇದಾಗಿದೆ. ಟಿಕೆಟ್ ಘೋಷಣೆಗೆ ಇಂದು ಸಂಜೆಯವರೆಗೆ ಟೈಮ್ ಇದೆ. ನನಗೆ ಬಿಜೆಪಿ ಟಿಕೆಟ್ ನೀಡುವ ವಿಶ್ವಾಸವಿದೆ. ಈ ಭಾಗದಲ್ಲಿ ಬಿಜೆಪಿ ಕಟ್ಟಿ ಬೆಳಸಲು ಶ್ರಮಿಸಿದವರಲ್ಲಿ ನಾನು ಒಬ್ಬ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ದಿವಂಗತ ಬಿಜೆಪಿ ನಾಯಕ ಅನಂತ ಕುಮಾರ ಅವರ ಜೊತೆಗೆ ಪಕ್ಷ ಕಟ್ಟಿದ್ದೇನೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಗಟ್ಟಿಯಾಗಿದೆ ಎಂದು ಹೇಳಿದ್ದಾರೆ.

ಬೆಳಗಾವಿ ಸೇರಿ ರಾಜ್ಯದ ನಾನ ಕಡೆ ಜನ ನನಗೆ ಟಿಕೆಟ್ ಘೋಷಣೆಯಾಗದ ಕಾರಣಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಎರಡು ದಿನದ ಹಿಂದೆ ರಾಷ್ಟ್ರೀಯ ಅಧ್ಯಕ್ಷರು ಕರೆ ಮಾಡಿದ್ದರು. ನಾನು ಅವರಿಗೆ ಗೌರವ ಕೊಟ್ಟು ಹೋಗಿ ಬಂದೆ. ನಾನು ರಾಜಕೀಯಕ್ಕೆ ಬಂದಿದ್ದು ಆ್ಯಕ್ಸಿಡೆಂಡ್ಲಿ. ಅವಕಾಶ ಸಿಕ್ತು ಸದುಪಯೋಗ ಮಾಡಿಕೊಂಡೆ. ನಾನು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಇನ್ನೊಂದು ಬಾರಿ ಅವಕಾಶ ಕೊಡಿ ಎಂದಿದ್ದೆ. ಎರಡು ದಿನದಲ್ಲಿ ತಿಳಿಸುತ್ತೇನೆ ಎಂದಿದ್ದಾರೆ. ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಯಡಿಯೂರಪ್ಪ ಅವರ ಬೆಂಬಲ ನನಗೆ ಇದೆ. ಯಡಿಯೂರಪ್ಪ ಸ್ಪರ್ಧೆ ಮಾಡಿ ಎಂದು ಒಪನ್ ಆಗಿ ಹೇಳಿದ್ದಾರೆ. ನನಗೆ ನಿಮ್ಮ ಶಕ್ತಿ ಇದೆ ಎಂದು ಹೇಳಿದ್ದಾರೆ.

Tags: Ex-CM Jagdish Shettar missed the ticket?
ShareTweetSendShare
Join us on:

Related Posts

ಕನ್ನಡಪರ ಹೋರಾಟಗಾರರು ನಾಲಾಯಕ ಎಂದ MES ಮುಖಂಡ;ಪದೇ ಪದೇ ಬೆಳಗಾವಿಯಲ್ಲಿ ಭಾಷಾ, ಗಡಿ ವಿವಾದ ಸೃಷ್ಟಿಸುತ್ತಿರೋ MES ಹೆಡೆಮುರಿ ಕಟ್ಟೋರು ಯಾರು?

ಕನ್ನಡಪರ ಹೋರಾಟಗಾರರು ನಾಲಾಯಕ ಎಂದ MES ಮುಖಂಡ;ಪದೇ ಪದೇ ಬೆಳಗಾವಿಯಲ್ಲಿ ಭಾಷಾ, ಗಡಿ ವಿವಾದ ಸೃಷ್ಟಿಸುತ್ತಿರೋ MES ಹೆಡೆಮುರಿ ಕಟ್ಟೋರು ಯಾರು?

by Shwetha
February 23, 2025
0

ಬೆಳಗಾವಿಯಲ್ಲಿ ನಡೆದ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣವು ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ, 20ಕ್ಕೂ ಹೆಚ್ಚು ಜನರ ಗುಂಪು ಕನ್ನಡ ಮಾತನಾಡಿದ...

ಬೆಳಗಾವಿ ಗಡಿಯಲ್ಲಿ ಉದ್ವಿಗ್ನ: ಕರ್ನಾಟಕ – ಮಹಾರಾಷ್ಟ್ರ ನಡುವಿನ ಬಸ್​ ಸೇವೆ ಸ್ಥಗಿತ

ಬೆಳಗಾವಿ ಗಡಿಯಲ್ಲಿ ಉದ್ವಿಗ್ನ: ಕರ್ನಾಟಕ – ಮಹಾರಾಷ್ಟ್ರ ನಡುವಿನ ಬಸ್​ ಸೇವೆ ಸ್ಥಗಿತ

by Shwetha
February 23, 2025
0

ಬೆಳಗಾವಿ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ, ಮತ್ತು ಮಹಾರಾಷ್ಟ್ರ-ಕರ್ನಾಟಕ ನಡುವಿನ ಬಸ್ ಸೇವೆ ಸ್ಥಗಿತಗೊಂಡಿದೆ. ಈ ಘಟನೆಗೆ ಕಾರಣವಾದುದು, ಕನ್ನಡ ಮಾತನಾಡಲು ನಿರಾಕರಿಸಿದ ಬಸ್ ಕಂಡಕ್ಟರ್ ಮೇಲೆ ಮರಾಠಿ...

ಮದ್ಯ ಸೇವಿಸಿದ ವಿಚಾರಕ್ಕೆ ಗಲಾಟೆ: ಪ್ರಿಯಕರ ಆತ್ಮಹತ್ಯೆ

ಮದ್ಯ ಸೇವಿಸಿದ ವಿಚಾರಕ್ಕೆ ಗಲಾಟೆ: ಪ್ರಿಯಕರ ಆತ್ಮಹತ್ಯೆ

by Author2
January 16, 2025
0

ಬಾಗಲಕೋಟೆ: ಮದ್ಯ ಸೇವಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಿಯಕರ ಹಾಗೂ ಪ್ರಿಯತಮೆ ಮಧ್ಯೆ ಗಲಾಟೆ ನಡೆದಿದ್ದು, ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಈ ಘಟನೆ ಬೀಳಗಿ (Bilagi)...

ವಿದ್ಯಾಕಾಶಿಗೆ ಪ್ರತ್ಯೇಕ ಪಾಲಿಕೆ: ಹರ್ಷ

ವಿದ್ಯಾಕಾಶಿಗೆ ಪ್ರತ್ಯೇಕ ಪಾಲಿಕೆ: ಹರ್ಷ

by Author2
January 2, 2025
0

ಬೆಂಗಳೂರು: ವಿದ್ಯಾಕಾಶಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಹುಬ್ಬಳ್ಳಿ (Hubballi) ಮಹಾನಗರ ಪಾಲಿಕೆಯಿಂದ ಧಾರವಾಡವನ್ನು (Dharwad) ಪ್ರತ್ಯೇಕಿಸಲಾಗಿದೆ. ಧಾರವಾಡ...

ನಾನು ಜಮೀರ್ ನನ್ನು ಕುಳ್ಳ ಅಂದಿಲ್ಲ, ಚನ್ನಪಟ್ಟಣ ಜನರ ಆಶೀರ್ವಾದವಾಗಿದೆ

ಕಾಂಗ್ರೆಸ್ ಸಮಾವೇಶ: ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ

by Author2
December 26, 2024
0

ಮಂಡ್ಯ: ಕಾಂಗ್ರೆಸ್ ಮಾಡುತ್ತಿರುವ ಸಮಾವೇಶದ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಗಾಂಧಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram