ಬಾಗಲಕೋಟೆ: ಮಾಜಿ ಸಚಿವ ಮುರುಗೇಶ್ ನಿರಾಣಿ ಅವರಿಗೆ ಮಾತೃ ವಿಯೋಗವಾಗಿದೆ.
ಅನಾರೋಗ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ನಿರಾಣಿ ಅವರ ತಾಯಿ ಸುಶಿಲಾಬಾಯಿ(78) ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಅವರು ಕಳೆದ 10 ವರ್ಷಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತ ತಾಯಿಯು, ಪತಿ ರುದ್ರಪ್ಪ ನಿರಾಣಿ, ಐವರು ಗಂಡು ಮಕ್ಕಳು,ಇಬ್ಬರು ಹೆಣ್ಣುಮಕ್ಕಳು, ಐವರು ಸೊಸೆಯಂದಿರು 14 ಜನ ಮೊಮ್ಮಕ್ಕಳನ್ನು ಅಗಲಿ, ಇಹಲೋಕ ತ್ಯಜಿಸಿದ್ದಾರೆ.
ಈ ಕುಟುಂಬ ಬೀಳಗಿ ತಾಲ್ಲೂಕಿನ ಬಸವಹಂಚಿನಾಳ ಗ್ರಾಮದಲ್ಲಿ ನೆಲೆಸಿತ್ತು. ನಾಳೆ ಮಧ್ಯಾಹ್ನ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.