ಚೀನಾದಲ್ಲಿ ಉಲ್ಬಣಗೊಂಡ ಕೊರೊನಾ | ಆಹಾರ, ಔಷಧ ಸಿಗದೆ ಜನರ ಪರದಾಟ
ಶಾಂಘೈ: ಚಿನಾದಲ್ಲಿ ಕೊರೊನಾ ಮತ್ತೆ ಉಲ್ಬಣಗೊಂಡಿದ್ದು, ಚೀನಾದ ಪ್ರಮುಖ ನಗರಗಳನ್ನು ಲಾಕ್ ಡೌನ್ ಮಾಡಲಾಗಿದೆ.
ಇನ್ನೂ ಶಾಂಘೈ ಸುತ್ತಮುತ್ತ ಜನ ತೀವ್ರ ತತ್ತರಿಸಿ ಹೋಗಿದ್ದಾರೆ. ನಗರದಲ್ಲಿ ಜನರಿಗೆ ಮನೆಯಲ್ಲಿ ತಿನ್ನಲು ಆಹಾರ, ಕುಡಿಯಲು ನೀರು, ಔಷಧಿಗಳ ಕೊರತೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಂಭಂದ ಕಟ್ಟಿನಿಟ್ಟಿನ ಕ್ರಮಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಟ್ಟಡ, ಬಾಲ್ಕನಿಗಳು ಮತ್ತು ಕಿಟಕಿಗಳಿಂದ ಕೂಗು, ಕಿರುಚಾಟ ಮತ್ತು ಹಾಡುಗಳನ್ನು ಹಾಡುತ್ತಾ ಸರ್ಕಾರದ ವಿರುದ್ಧ ತಮ್ಮ ಅಸಹಾಯಕತೆ ಆಕ್ರೋಶವನ್ನು ಹೊರಹಾಕಿದ್ದಾರೆ.
ಶಾಂಘೈನಲ್ಲಿ ಪ್ರತಿದಿನ 20 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಭಾನುವಾರ, ಏಪ್ರಿಲ್ 10, 2022 ರಂದು, ಒಂದೇ ದಿನದಲ್ಲಿ 25,000 ಪ್ರಕರಣಗಳು ದಾಖಲಾಗಿವೆ. ಮಾರ್ಚ್ ತಿಂಗಳಲ್ಲಿ 70,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ವೈರಸ್ ನಿಯಂತ್ರಣದ ಭಾಗವಾಗಿ ಏಪ್ರಿಲ್ 1 ರಿಂದ ಶಾಂಘೈ ನಗರದಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ. ಹತ್ತು ದಿನಗಳ ಕಾಲ ಕಟ್ಟುನಿಟ್ಟಾದ ಲಾಕ್‌ಡೌನ್ ಅನ್ನು ಜಾರಿಗೊಳಿಸಿದ್ದಾರೆ. ಇದರಿಂದಾಗಿ ಅಗತ್ಯ ವಸ್ತುಗಳ ಕೊರತೆ, ವಯೋವೃದ್ಧರಿಗೆ ಔಷಧೋಪಚಾರ, ಆಹಾರವೂ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.








