ನನ್ನನ್ನ ನಿಮ್ಮ ಮಗಳೆಂದುಕೊಂಡು ಪಾಸ್ ಮಾಡಿ ಪ್ಲೀಸ್.. ಪರೀಕ್ಷಾ ಪೇಪರ್ ನಲ್ಲಿ ವಿದ್ಯಾರ್ಥಿನಿ ಮನವಿ..!
ಬಿಹಾರದಲ್ಲಿ ವಿದ್ಯಾರ್ಥಿಯೊಬ್ಬಳು ಪರೀಕ್ಷಾ ಪೇಪರ್ ನಲ್ಲಿ ನಲ್ಲಿ ತನ್ನನ್ನ ದಯಮಾಡಿ ಪಾಸ್ ಮಾಡಿ ಎಂದು ಬೇಡಿಕೊಂಡಿದ್ದಾಳೆ. ಹೌದು ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ನೀವು ಪಾಸ್ ಮಾಡದೇ ಇದ್ದರೆ ನನ್ನ ಮದುವೆ ನಿಂತು ಹೋಗುತ್ತೆ ಎಂದು ಬರೆದಿರುವುದಾಗಿ ತಿಳಿದುಬಂದಿದೆ.
74 ವರ್ಷದ ವೃದ್ಧನ ಹತ್ಯೆ ಪ್ರಕರಣ : ಮೂವರು ಬಿಜೆಪಿ ಕಾರ್ಯಕರ್ತರ ಬಂಧನ..!
ಇಷ್ಟೇ ಅಲ್ಲ ನನ್ನ ಮದುವೆ ಮೇ 26ರಂದು ನಿಶ್ಚಯವಾಗಿದೆ. ಒಂದು ವೇಳೆ ನಾನು ಅನುತ್ತೀರ್ಣಳಾದರೆ ಪರಿಣಾಮ ಏನಾಗುತ್ತೋ ನನಗೆ ತಿಳಿದಿಲ್ಲ. ಹೀಗಾಗಿ ದಯಮಾಡಿ ನನ್ನನ್ನ ಪಾಸ್ ಮಾಡಿ.
ನನಗೆ ಅನಾರೋಗ್ಯವಿದ್ದ ಕಾರಣ ಸರಿಯಾಗಿ ವ್ಯಾಸಂಗ ಮಾಡಲು ಸಾಧ್ಯವಾಗಲಿಲ್ಲ ಎಂದು ಸಹ ಬರೆದಿಟ್ಟಿರೋದಾಗಿ ಗೊತ್ತಾಗಿದೆ. ನಿಮ್ಮದೇ ಮಗಳು ಎಂದುಕೊಂಡು ನನಗೆ ಒಳ್ಳೆಯ ಅಂಕಗಳನ್ನ ನೀಡಿ. ನಾನು ತುಂಬಾ ಬಡತನದ ಕುಟುಂಬಕ್ಕೆ ಸೇರಿದವಳು. ನಿಮಗೂ ಮಗಳಿದ್ದರೆ ದಯಮಾಡಿ ನನ್ನನ್ನ ಅರ್ಥ ಮಾಡಿಕೊಳ್ಳಿ ಎಂದಿದ್ದಾಳೆ.
ಒಟ್ಟಾರೆ ಪರೀಕ್ಷೆಯಲ್ಲಿ ಪಾಸ್ ಆಗಲು ವಿದ್ಯಾರ್ಥಿಗಳು ಕಾಪಿ ಮಾಡುವುದು, ಕಾಪಿ ಚೀಟಿ ತರುವುದು, ಕ್ಯಾಲ್ಕುಲೇರ್ ಗಳ ಹಿಂದೆ ಫಾರ್ಮುಲಾಗಳನ್ನ ಬರೆದಿರುವುದು, ಶಿಕ್ಷಕರಿಗೆ ಆಮಿಷ ಒಡ್ಡಿರುವುದು, ಎಕ್ಸಾಂ ಪೇಪರ್ ಗಳಲ್ಲಿ ದುಡ್ಡು ಇಟ್ಟಿರುವ ನೇಕ ಪ್ರಕರಣಗಳನ್ನ ನೋಡಿದ್ದೇವೆ. ಈ ಪ್ರಕರಣ ಅದೆಲ್ಲದಕಿಂತಲೂ ಡಿಫರೆಂಟ್ ಆಗಿದೆ.
ಮಾಸ್ಕ್ ಧರಿಸುವಂತೆ ಹೇಳಿದ್ದೇ ತಪ್ಪಾ… ಮಾರ್ಷಲ್ ಜುಟ್ಟು ಹಿಡಿದು ಹೊಡೆದ ಮಹಿಳೆ..! VIDEO VIRAL
ಆಸ್ಟ್ರೇಲಿಯಾದಲ್ಲಿ ರಣಭೀಕರ ಪ್ರವಾಹ : ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ..!