ಬದಲಾಗಬೇಕಿದೆ ಅಬಕಾರಿ ನೀತಿ, ಸಾಮಾನ್ಯರ ಕೈಗೂ ಸಿಗಬೇಕು ಬೆಸ್ಟ್ ಬ್ರಾಂಡ್ ..!
ಎಣ್ಣೆ ಪ್ರಿಯರುಎಣ್ಣೆ ಸಿಕ್ಕರಾಯ್ತು, ಬ್ರಾಂಡ್ ಯಾವುದಾದರೇನು..? ಕುಡಿದು ನೆಮ್ಮದಿಯಾಗಿ ಇದ್ದರೆ ಸಾಕು ಅನ್ನುವವರೇ ಹೆಚ್ಚು. ಆದರೆ ಕಡಿಮೆ ದರದ ಕಳಪೆ ಗುಣಮಟ್ಟದ ಆಲ್ಕೋಹಾಲ್ ದೇಹಕ್ಕೆ ಹಾನಿಕಾರಕ. ಇದರಿಂದ ಸರ್ಕಾರದ ಖಜಾನೆಗೂ ನಷ್ಟ. ಕೇವಲ ಕಡಿಮೆ ಬೆಲೆಯಲ್ಲಿ ಲಿಕ್ಕರ್ ಸಿಗುತ್ತದೆ ಅನ್ನುವ ಒಂದೇ ಕಾರಣಕ್ಕೆ ಕಡಿಮೆ ಗುಣಮಟ್ಟದ, ಕಳಪೆ ಬ್ರಾಂಡ್ ಗಳ ಆಲ್ಕೋಹಾಲ್ ಕರ್ನಾಟಕದಲ್ಲಿ ಮಾರಾಟವಾಗುತ್ತಿದೆ. ಕಳಪೆ ಗುಣಮಟ್ಟದ, ಕಳಪೆ ಬ್ರಾಂಡ್ಗಳ ಮಾರಾಟ, ದೊಡ್ಡ ದೊಡ್ಡ ಬ್ರಾಂಡ್ಗಳ ಮಾರಾಟಕ್ಕೆ ತೀವ್ರ ಹೊಡೆತ ನೀಡಿದೆ. ಉತ್ತಮ ಬ್ರಾಂಡ್ಗಳಿಗೆ ಬೆಲೆಯೂ ಹೆಚ್ಚಿರುವುದರಿಂದ ಕಡಿಮೆ ಗುಣಮಟ್ಟದ ಮತ್ತು ಕಳಪೆ ಬ್ರಾಂಡ್ಗಳೇ ರಾಜ್ಯದಲ್ಲಿದ ಮಾರುಕಟ್ಟೆಗಳಲ್ಲಿ ದರ್ಬಾರ್ ಮಾಡುತ್ತಿವೆ. Liquor saaksha tv
ಕರ್ನಾಟಕದ ರೆಡ್ಡಿ (ಹೆಸರು ಬದಲಿಸಲಾಗಿದೆ) ಅನ್ನುವವರು ದೆಹಲಿಯ ಇಂದಿರಾ ಗಾಂಧಿ ಇಂಟರ್ ನ್ಯಾಷನಲ್ ಏರ್ಪೋಟ್ ಗೆ 4 ಗಂಟೆ ಮುಂಚಿತವಾಗಿ ತಲುಪಿದ್ದರು. ಹೇಗೂ ಸಮಯವಿದೆಯಲ್ಲ ಅನ್ನುವ ಯೋಚನೆಯಲ್ಲಿ ದೊಡ್ಡ ಕ್ಯೂ ಇದ್ದರೂ ಅದರಲ್ಲೇ ನಿಂತು ಎರಡು ಉತ್ತಮ ಬ್ರಾಂಡ್ನ ವಿಸ್ಕಿ ಖರೀದಿ ಮಾಡಿ ಖುಷಿಯಾಗಿದ್ದರು. ಯಾಕೆ ಹೀಗೆ ಅಂತ ಕೇಳಿದಾಗ, ರೆಡ್ಡಿಯವರು ಹೇಳಿದ್ದು ಅಚ್ಚರಿ ತಂದಿತ್ತು. ಐಜಿಐನಲ್ಲಿ ಖರೀದಿ ಮಾಡಿದ ವಿಸ್ಕಿಯ ಬೆಲೆ ಕಡಿಮೆ ಇದ್ದರೂ ಬ್ರಾಂಡ್ ದೊಡ್ಡದಿತ್ತು. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಈ ಬ್ರಾಂಡ್ಗಳು ಸಿಗುತ್ತಿಲ್ಲ ಅಂದಿದ್ದು ಅಚ್ಚರಿ ಮೂಡಿಸಿತ್ತು. ಇದು ರೆಡ್ಡಿ ಒಬ್ಬರ ಕಥೆಯಲ್ಲ, ಹಲವು ವಿಸ್ಕಿ ಮತ್ತು ಆಲ್ಕೋಹಾಲ್ ಪ್ರಿಯರು ದೆಹಲಿಗೆ ಹೋಗುವ ಅವಕಾಶ ಸಿಕ್ಕಾಗಲೆಲ್ಲಾ ಐಜಿಐ ಏರ್ಪೋರ್ಟ್ ನಿಂದ ಖರೀದಿ ಮಾಡಿದ ಉದಾಹರಣೆಗಳಿವೆ.
ರಾಜ್ಯದ ಈ ಸ್ಥಿತಿ ಕೇವಲ ಎಣ್ಣೆ ಪ್ರಿಯರ ಆರೋಗ್ಯಕ್ಕೆ ಮಾತ್ರ ಹೊಡೆತವಲ್ಲ. ಬದಲಾಗಿ ಆದಾಯಕ್ಕೂ ಕೊಕ್ಕೆ ಹಾಕಿದೆ. ರಾಜ್ಯದ ಲಿಕ್ಕರ್ ಪಾಲಿಸಿಯಿಂದ ಅಬಕಾರಿ ಇಲಾಖೆಯ ಆದಾಯಕ್ಕೂ ಹೊಡೆತ ಬೀಳುತ್ತಿದೆ. ಅಚ್ಚರಿ ಅಂದ್ರೆ Indian Made Foreign Liquor ಮಾರ್ಕೆಟ್ ನಲ್ಲಿ ಕರ್ನಾಟಕ ಪಾಲು ದೇಶದಲ್ಲೇ ಹೆಚ್ಚಿದೆ. ಆದರೆ ಕರ್ನಾಟಕದ ಅಬಕಾರಿ ನೀತಿ IMFL ಪ್ರಿಯರನ್ನು ಅವರ ಆಯ್ಕೆಯ ಬ್ರಾಂಡ್ನಿಂದ ಹೊರಗಿಟ್ಟಿದೆ. ಅಷ್ಟೇ ಅಲ್ಲ ಅಬಕಾರಿ ಇಲಾಖೆಯ ಖಜಾನೆ ಕೂಡ ತುಂಬುತ್ತಿಲ್ಲ.
ಕರ್ನಾಟಕ ದಕ್ಷಣ ಭಾರತದಲ್ಲಿ ಅತೀ ಹೆಚ್ಚು ಬಾಟಲ್ಡ್ ಆಲ್ಕೋಹಾಲ್ ಮಾರಾಟ ಮಾಡುತ್ತಿದೆ. ಆದರೆ ಅಬಕಾರಿ ಇಲಾಖೆಯಿಂದ ತೆರಿಗೆ ರೂಪದಲ್ಲಿ ಖಜಾನೆ ಸೇರುವ ಮತ್ತ ಮಾತ್ರ ಇತರೆ ರಾಜ್ಯಕ್ಕೆ ಹೋಲಿಸಿದರೆ ತುಂಬಾ ಕಡಿಮೆ. ನೆರೆಯ ತೆಲಂಗಾಣದಲ್ಲಿ ಕರ್ನಾಟಕದಲ್ಲಿ ಮಾರಾಟವಾಗುವ ಆಲ್ಕೋಹಾಲ್ ಪೈಕಿ ಕೇವಲ 50 ಪ್ರತಿಶತ ಮಾತ್ರ ಮಾರಾಟವಾಗುತ್ತದೆ. ಆದರೆ ಅಲ್ಲಿನ ಅಬಕಾರಿ ಆದಾಯ ಹೆಚ್ಚಿದೆ. ಕರ್ನಾಟಕದಲ್ಲಿ ಪ್ರೀಮಿಯರ್ ಮತ್ತು IMFL ಬ್ರಾಂಡ್ಗೆ ಹೆಚ್ಚು ಬೇಡಿಕೆ ಇದೆ ಅನ್ನುವುದು ಸ್ಪಷ್ಟ. ಇದರಿಂದ ಅಬಕಾರಿ ಇಲಾಖೆಗೂ ಹೆಚ್ಚು ಆದಾಯ ಬರುವುದು ಖಚಿತ. ಆದರೆ ಕರ್ನಾಟಕದ ಅಬಕಾರಿ ನೀತಿ ಬದಲಾಗಬೇಕಿದೆ.
ಕಡಿಮೆ ಗುಣಮಟ್ಟದ ಮತ್ತು ಕಳಪೆ ಬ್ರಾಂಡ್ ಗಳ ಮಾರಾಟದಿಂದ ಎಣ್ಣೆ ಪ್ರಿಯರ ಆರೋಗ್ಯದ ಮೇಲೂ ಪ್ರಭಾವ ಬೀರಿದೆ. ಕೆಲಸಗಾರರು ಕಡಿಮೆ ಬೆಲೆಯಲ್ಲಿ ಮದ್ಯ ಸಿಗುತ್ತದೆ ಅನ್ನುವ ಕಾರಣಕ್ಕಾಗಿ ತಮ್ಮ ಆರೋಗ್ಯವನ್ನು ಬಲಿಕೊಡುತ್ತಿದ್ದಾರೆ. ಹೀಗಾಗಿ ಸರ್ಕಾರ ಅತೀ ಶೀಘ್ರದಲ್ಲಿ ತನ್ನ ಅಬಕಾರಿ ನೀತಿಯನ್ನು ಬದಲಿಸಬೇಕಿದೆ. ಹೊಸ ಅಬಕಾರಿ ನೀತಿಯಿಂದ ಜನರ ಆರೋಗ್ಯವೂ ಉತ್ತಮಗೊಳ್ಳುವುದಲ್ಲದೆ ಅಬಕಾರಿ ಇಲಾಖೆಯ ಖಜಾನೆಗೆ ಟ್ಯಾಕ್ಸ್ ಮೂಲಕ ಕೋಟ್ಯಾಂಟರ ರೂಪಾಯಿ ಹರಿದುಬರಲಿದೆ.