ಸೋನು ನೀಗಮ್ ಗೆ ಪದ್ಮ ಪ್ರಶಸ್ತಿ, ತಮ್ಮ ತಾಯಿ ಗೆ ಸಮರ್ಪಣೆ….
ಈ ವರ್ಷ ಭಾರತ ಸರ್ಕಾರ ಘೋಷಿಸಿರು 128 ಪದ್ಮ ಪ್ರಶಸ್ತಿ ಪುರಸ್ಕೃತರ ಪೈಕಿ ಗಾಯಕ ಸೋನು ನಿಗಮ್ ಸಹ ಒಬ್ಬರು, ಸೋನು ನೀಗಮ್ ಕಲಾ ಕ್ಷೇತ್ರದಲ್ಲಿ ನೀಡಿದ ವಿಶಿಷ್ಟ ಸೇವೆಗಾಗಿ ಪದ್ಮಶ್ರೀಯನ್ನು ಗಳಿಸಿದ್ದಾರೆ.
1990 ರ ಆರಂಭದ ದಶಕದಲ್ಲಿ ಸ್ಟೇಜ್ ಶೋಗಳ ಮೂಲಕ ಗಾನ ಲೋಕಕ್ಕೆ ಪ್ರವೇಶ ಮಾಡಿದರು. 1993 ಬಿಡುಗಡೆಯಾದ ಆಜಾ ಮೇರಿ ಜಾನ್; ಚಿತ್ರದ ಓ ಆಸ್ಮಾನ್ ವಾಲೆ ಜಮೀನ್ ಪರ್ ಉತರ್ ಕೆ ದೇಖ್ ಹಾಡಿನ ಮೂಲಕ ಹಿಂದಿ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಭಾರತದ ಬಹುತೇಕ ಭಾಷೆಗಳಲ್ಲಿ ಹಾಡಿರುವ ಅವರು 5000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ, ಕಲ್ ಹೋ ನಾ ಹೋ (2003) ಟೈಟಲ್ ಟ್ರ್ಯಾಕ್‌ಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಚಲನಚಿತ್ರ ಹಾಡುಗಳ ಹೊರತಾಗಿ, ಸೋನು ನಿಗಮ್ ಅವರ ಸಂಗೀತ ಆಲ್ಬಂಗಳಾದ ದೀವಾನಾ (1999), ಜಾನ್ (2000), ಚಂದಾ ಕಿ ಡೋಲಿ (2005) ಮತ್ತು ರಫಿ (2008) ಆಲ್ಬಂ ಗಳಿಗೆ ಹೆಸರು ವಾಸಿಯಾಗಿದ್ದಾರೆ. Exclusive! Sonu Nigam: I want to dedicate the Padma Shri to my mother
ಅವರು 1995 ರಲ್ಲಿ ರಿಯಾಲಿಟಿ ಶೋ ಸಾ ರೇ ಗಾ ಮಾ ಮೂಲಕ ದೂರದರ್ಶನದಲ್ಲಿ ನಿರೂಪಕರಾಗಿ ಕಾಣಿಸಿಕೊಂಡರು, ಇಂಡಿಯನ್ ಐಡಲ್ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.
ಪದ್ಮಶ್ರೀ ಗೌರವವನ್ನು ಪಡೆದ ನಂತರ ತಮ್ಮ ಸಂತೋಷವನ್ನು ಹಂಚಿಕೊಂಡ ನಿಗಮ್, “ಜನವರಿ 25 ನನಗೆ ಮತ್ತು ನನ್ನ ಕುಟುಂಬಕ್ಕೆ ವಿಶೇಷ ದಿನವಾಗಿತ್ತು. ನನ್ನನ್ನು ಅರ್ಹ ಅಭ್ಯರ್ಥಿ ಎಂದು ಪರಿಗಣಿಸಿದ್ದಕ್ಕಾಗಿ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದ ಭಾರತ ಸರ್ಕಾರಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಪ್ರತಿಷ್ಠಿತ ಗೌರವಕ್ಕೆ ನನ್ನನ್ನು ಆಯ್ಕೆ ಮಾಡಿದ ಮತ್ತು ನನ್ನ ಹೆಸರನ್ನು ಸೂಚಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ”
“ನನ್ನ ತಾಯಿ ಶೋಭಾ ನಿಗಮ್ ಮತ್ತು ನನ್ನ ತಂದೆ ಆಗಮ್ ಕುಮಾರ್ ನಿಗಮ್ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಈ ಪ್ರಶಸ್ತಿಯನ್ನು ನನ್ನ ತಾಯಿಗೆ ಅರ್ಪಿಸಲು ಬಯಸುತ್ತೇನೆ. ಅವಳು ಇಂದು ಇಲ್ಲಿದ್ದರೆ ತುಂಬಾ ಅಳುತ್ತಿದ್ದಳು. ಎಂದು ತಿಳಿಸಿದ್ದಾರೆ.
ನಂತರ ಗುರುಗಳ ಬಗ್ಗೆ ಮಾತನಾಡಿದ ಸೋನು . ಇಂದು ನಾನು ಏನನ್ನು ತಿಳಿದಿದ್ದೇನೆಯೋ ಅದು ಅವರ ಮತ್ತು ಅವರ ಆಶೀರ್ವಾದದಿಂದ “ನನ್ನ ಪ್ರಯಾಣದ ಭಾಗವಾಗಿರುವ ನನ್ನ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಮತ್ತು ನನ್ನ ಬೆಂಬಲದ ಆಧಾರಸ್ತಂಭವಾಗಿರುವ ನನ್ನ ಕುಟುಂಬಕ್ಕೆ ನನ್ನ ಪ್ರಾಮಾಣಿಕ ಕೃತಜ್ಞತೆಗಳು.” ಎಮದು ಸೋನು ನೀಗಮ್ ಹೇಳಿದ್ದಾರೆ.