ಭಾರತದಲ್ಲಿ ಮೊಬೈಲ್ ತಯಾರಕ ಕಂಪನಿಗಳಿಂದ ದೇಶದಲ್ಲಿ 300,000 ನೇರ ಉದ್ಯೋಗಗಳ ನಿರೀಕ್ಷೆ
ಹೊಸದಿಲ್ಲಿ, ಅಗಸ್ಟ್ 2: ಕೇಂದ್ರ ಸರ್ಕಾರ ಘೋಷಿಸಿದ 6.5 ಬಿಲಿಯನ್ ಡಾಲರ್ ಪ್ರೋತ್ಸಾಹಕ ಯೋಜನೆಯಡಿ ಆಪಲ್ ಐಫೋನ್‌ಗಳ ಮೂರು ಗುತ್ತಿಗೆ ತಯಾರಕರು ಮತ್ತು ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಭಾರತದಲ್ಲಿ ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಹಕ್ಕುಗಳಿಗಾಗಿ ಅರ್ಜಿ ಸಲ್ಲಿಸಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಚಿವ ರವಿಶಂಕರ್ ಪ್ರಸಾದ್ ಶನಿವಾರ ತಿಳಿಸಿದ್ದಾರೆ.
ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿರುವ ಅಂತರರಾಷ್ಟ್ರೀಯ ಸೆಲ್‌ಫೋನ್ ಉತ್ಪಾದನಾ ಕಂಪನಿಗಳು ಸ್ಯಾಮ್‌ಸಂಗ್, ರೈಸಿಂಗ್ ಸ್ಟಾರ್ ಮತ್ತು ಮೂರು ಆಪಲ್ ಗುತ್ತಿಗೆ ತಯಾರಕರಾದ – ಫಾಕ್ಸ್‌ಕಾನ್ ಹೊನ್ ಹೈ, ವಿಸ್ಟ್ರಾನ್ ಮತ್ತು ಪೆಗಾಟ್ರಾನ್.
ಮುಂದಿನ ಐದು ವರ್ಷಗಳಲ್ಲಿ, ಸುಮಾರು 11.5 ಲಕ್ಷ ಕೋಟಿ ರೂ. ಒಟ್ಟು ಉತ್ಪಾದನೆಯಲ್ಲಿ, ಮೊಬೈಲ್ ಫೋನ್ (ಇನ್-ವಾಯ್ಸ್ ಮೌಲ್ಯ 15,000 ಮತ್ತು ಅದಕ್ಕಿಂತ ಹೆಚ್ಚಿನ) ವಿಭಾಗದ ಅಡಿಯಲ್ಲಿರುವ ಕಂಪನಿಗಳು 9 ಲಕ್ಷ ಕೋಟಿ ರೂ.ಗಳ ಉತ್ಪಾದನೆಯನ್ನು ಪ್ರಸ್ತಾಪಿಸಿವೆ.
ಮೊಬೈಲ್ ಫೋನ್ (ದೇಶೀಯ ಕಂಪನಿಗಳು) ವಿಭಾಗದ ಅಡಿಯಲ್ಲಿರುವ ಕಂಪನಿಗಳು ಸುಮಾರು 2 ಲಕ್ಷ ಕೋಟಿ ರೂ. ಮತ್ತು ನಿಗದಿತ ಎಲೆಕ್ಟ್ರಾನಿಕ್ ಘಟಕಗಳ ಅಡಿಯಲ್ಲಿರುವವರು 45,000 ಕೋಟಿ ರೂ.ಗಳ ಉತ್ಪಾದನೆಯನ್ನು ಪ್ರಸ್ತಾಪಿಸಿದ್ದಾರೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಹೇಳಿಕೆ ತಿಳಿಸಿದೆ.
ಈ ಯೋಜನೆಯು 2019-2020ರ ಮೂಲ ವರ್ಷದಲ್ಲಿ ಭಾರತದಲ್ಲಿ ತಯಾರಾದ ಸರಕುಗಳ ಹೆಚ್ಚಳಕ್ಕೆ ಐದು ವರ್ಷಗಳವರೆಗೆ 4-6% ನಗದು ಪ್ರೋತ್ಸಾಹವನ್ನು ವಿಸ್ತರಿಸಲಿದೆ ಎಂದು ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.
ಈ ಯೋಜನೆಯು ಭಾರತದಲ್ಲಿ ಆಪಲ್ ಮತ್ತು ಸ್ಯಾಮ್‌ಸಂಗ್‌ನ ಉತ್ಪಾದನಾ ಮೂಲವನ್ನು ಹೆಚ್ಚಿಸುತ್ತದೆ ಎಂದು ಹೇಳಿದ ಅವರು ಸೆಲ್‌ಫೋನ್ ವಿಭಾಗದಲ್ಲಿ ಸುಮಾರು ಎರಡು ಡಜನ್ ಭಾರತೀಯ ಮತ್ತು ಅಂತರರಾಷ್ಟ್ರೀಯ ಕಂಪನಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಇದು ದೇಶದಲ್ಲಿ 300,000 ನೇರ ಉದ್ಯೋಗಗಳನ್ನು ಗಳಿಸುವ ನಿರೀಕ್ಷೆಯಿದೆ ಎಂದು ಪ್ರಸಾದ್ ಹೇಳಿದ್ದಾರೆ. ಅಷ್ಟೇ ಅಲ್ಲ ಸುಮಾರು ಒಂಬತ್ತು ಲಕ್ಷ ಪರೋಕ್ಷ ಉದ್ಯೋಗಗಳು ಸಹ ಸೃಷ್ಟಿಯಾಗುವ ನಿರೀಕ್ಷೆಯಿದೆ.